Job Description: * ಉಡಾನ್ ಪ್ರಾದೇಶಿಕ ವಾಯು ಸಂಪರ್ಕ ಯೋಜನೆ ಅಡಿಯಲ್ಲಿ ಇದೀಗ ಭಾರತ ಸರ್ಕಾರವು 780 ಹೊಸ ವಿಮಾನ ಸಂಚಾರ ಮಾರ್ಗಗಳಿಗೆ ಅನುಮೋದಿಸಿದೆ ಎಂದು ನಾಗರಿಕ ವಿಮಾನಯಾನ ಸಚಿವರಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ. * ದೇಶದಲ್ಲಿ ಯೋಜನೆಯಿಂದಾಗಿ 359 ಮಾರ್ಗಗಳನ್ನು ಆರಂಭಿಸಲಾಗಿದೆ, ಹಾಗೂ ಉಡಾನ್ ಯೋಜನೆಯಡಿ 59 ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ. * 2017 ರಲ್ಲಿ ಈ ಉಡಾನ್ ಯೋಜನೆಯನ್ನು ಆರಂಭಿಸಲಾಗಿದೆ, UDAN (Ude Desh ka Aam Naagrik) ಎನ್ನುವದು ಭಾರತ ಸರ್ಕಾರದ ಪ್ರಾದೇಶಿಕ ಸಂಪರ್ಕ ಮತ್ತು ಪ್ರಾದೇಶಿಕ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಯಾಗಿದೆ. * ಈ ಉಡಾನ್ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಹಣ ನೀಡುತ್ತವೆ.