Job Description: * ಪಂಜಾಬ್ ಕೃಷಿ ವಿಶ್ವವಿದ್ಯಾಲಯ (PAU) ಅಧ್ಯಯನ ನಡೆಸಿರುವ 1998 ಮತ್ತು 2018 ರ ಪ್ರಕಾರ ಪಂಜಾಬ್'ನ 22 ಪ್ರದೇಶಗಳಲ್ಲಿನ ಅಂತರ್ಜಲ ಮಟ್ಟವು ಪ್ರತಿ ವರ್ಷಕ್ಕೆ 1 ಮೀ. ಕಡಿಮೆಯಾಗಿದೆ ಎಂದು ಕಂಡುಹಿಡಿದಿದ್ದಾರೆ. * ಪ್ರಸ್ತುತ ಪಂಜಾಬ್ ಕೃಷಿ ವಿಶ್ವವಿದ್ಯಾಲಯ ನಡೆಸಿರುವ ಅಧ್ಯಯನದ ಪ್ರಕಾರ ಈ ಮೊದಲು 3 ರಿಂದ 10 ಮೀ.ನಲ್ಲಿ ಲಭ್ಯವಿರುವ ಅಂತರ್ಜಲವು 20 ವರ್ಷಗಳಲ್ಲಿ 30 ಮೀ.ಗಿಂತ ಕಡಿಮೆಯಾಗಿದೆ ಎಂದು ಅಧ್ಯಯನ ವರದಿಯನ್ನು ನೀಡಿದೆ. * ಈ ಪ್ರದೇಶದಲ್ಲಿ 1990 ರ ನಂತರ ಅಂತರ್ಜಲ ಮಟ್ಟ ಕುಸಿತದ ಸಮಸ್ಯೆ ಪ್ರಾರಂಭವಾಗಿದೆ, ನಂತರ 1998 ರಿಂದ ಅಂತರ್ಜಲ ಕುಸಿತದ ಪ್ರಮಾಣ ಏರಿಕೆಯಾಗುತ್ತಿದೆ, ಹಾಗೂ 2012 ರ ಅವಧಿಗೆ ಪರಿಸ್ಥಿತಿ ಕೈಮೀರಿ ಹೋಗಿದೆ ಎಂದು ಪಂಜಾಬ್ ಕೃಷಿ ವಿಶ್ವವಿದ್ಯಾಲಯ ತಿಳಿಸಿದೆ. * ಪಂಜಾಬ್ ಕೃಷಿ ವಿಶ್ವವಿದ್ಯಾಲಯವು 2018 ರ ಅವಧಿಗೆ ಪಂಜಾಬ್ ರಾಜ್ಯದ ಅಂತರ್ಜಲ ಮಟ್ಟವು 30 ಮೀ.ಗಿಂತ ಕಡಿಮೆಯಾಗಿದೆ ಎಂದು ವರದಿ ಮಾಡಿದೆ.