Job Description: * ಕೇಂದ್ರ ಸರ್ಕಾರವು 14 ಹುಲಿ ಮೀಸಲು ಅರಣ್ಯ ಪ್ರದೇಶಗಳಿಗೆ ಅಂತರರಾಷ್ಟ್ರೀಯ ಹುಲಿ ದಿನಾಚರಣೆಯ ದಿನದಂದು ಸಿಎ / ಟಿಎಸ್ (Global Conservation Assured / Tiger Standards) ಮಾನ್ಯತೆ ನೀಡಿದೆ. * ಕರ್ನಾಟಕ ರಾಜ್ಯದ ಬಂಡೀಪುರ, ಅಸ್ಸಾಂ ರಾಜ್ಯದ ಒರಾಂಗ್, ಸತ್ಪುರ, ಕನ್ಹ, ಕೇರಳ ರಾಜ್ಯದ ಪರಂಬಿಕುಲಂ, ಮಾನಸ, ಕಾಂಜಿರಂಗ, ಪಶ್ಚಿಮ ಬಂಗಾಳ ರಾಜ್ಯದ ಸುಂದರ್ಬನ್, ಮಧ್ಯಪ್ರದೇಶ ರಾಜ್ಯದ ಪನ್ನಾ ಹುಲಿ ಮೀಸಲು ಅರಣ್ಯ ಪ್ರದೇಶಗಳಿಗೆ ಸಿಎ / ಟಿಎಸ್ ಮಾನ್ಯತೆಯನ್ನು ನೀಡಲಾಗಿದೆ. * '7' ಹುಲಿ ಸಂರಕ್ಷಿತ ದೇಶಗಳ 125 ತಾಣಗಳಲ್ಲಿ ಸಿಎ/ ಟಿಎಸ್ ಮಾನ್ಯತೆ ಜಾರಿಗೆ ಬರಲಿದೆ ಎಂದಿದ್ದಾರೆ. * ಭಾರತದಲ್ಲಿನ 94 ತಾಣಗಳು ಈ ಮಾನ್ಯತೆಯನ್ನು ಪಡೆದಿವೆ, WWF (ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್)ಇಂಡಿಯಾ ನೀಡಿರುವ ಮಾಹಿತಿಯ ಪ್ರಕಾರ 20 ಹುಲಿ ಮೀಸಲು ಅರಣ್ಯ ಪ್ರದೇಶಗಳಿಗೆ ಈ ವರ್ಷ ಈ ಮೌಲ್ಯಮಾಪನ ನೀಡುವ ಕಾರ್ಯ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ.