Job Description: * ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಸಂಪನ್ಮೂಲಗಳ ದತ್ತಸಂಚಯವನ್ನು ರಚಿಸುತ್ತಿರುವುದಾಗಿ ಘೋಷಣೆ ಮಾಡಿದೆ. ಪ್ರಸ್ತುತ ಎಂಜಿನಿಯರಿಂಗ್ ವಿಷಯವನ್ನು ದೇಶದ 11 ಭಾಷೆಗಳಿಗೆ ಭಾಷಾಂತರಿಸುವ ಸಾಧನವನ್ನು AICTE ಅಭಿವೃದ್ಧಿಪಡಿಸಿದೆ. * ಪ್ರಾದೇಶಿಕ ಭಾಷೆಗಳನ್ನು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಕ್ರಮ ತಗೆದುಕೊಳ್ಳಲಾಗುತ್ತಿದೆ ಎಂದಿದ್ದಾರೆ. * 8 ರಾಜ್ಯಗಳಲ್ಲಿ, 14 ಎಂಜಿನಿಯರಿಂಗ್ ಕಾಲೇಜುಗಳು 5 ಭಾರತೀಯ ಭಾಷೆಗಳಲ್ಲಿ ಎಂಜಿನಿಯರಿಂಗ್ ಅಧ್ಯಯನವನ್ನು ಪ್ರಾರಂಭಿಸಲಿವೆ. * 5 ಭಾರತೀಯ ಭಾಷೆಗಳು: ಬಂಗಾಳಿ, ಹಿಂದಿ, ತೆಲುಗು, ತಮಿಳು ಮತ್ತು ಮರಾಠಿ. * ಪ್ರಸ್ತುತ ಪ್ರಾದೇಶಿಕ ಭಾಷೆಗಳಲ್ಲಿ ಬೋಧನೆ ಮಾಡುವದರಿಂದ ಕಡಿಮೆ ಆದಾಯ ಹೊಂದಿರುವ ಗ್ರಾಮೀಣ ಕುಟುಂಬಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಪ್ರವೇಶವನ್ನು ನೀಡುವಲ್ಲಿ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.