Job Description: * ಅಂತರಾಷ್ಟ್ರೀಯ ಹುಲಿ ದಿನವನ್ನು ವಿಶ್ವ ಹುಲಿ ದಿನ ಎಂದು ಕರೆಯುತ್ತಾರೆ, ಹಾಗೂ ಈ ದಿನವನ್ನು ಜುಲೈ 29 ರಂದು ಆಚರಿಸುತ್ತಾರೆ. * ಈ ದಿನದಂದು ಪ್ರಪಂಚದಲ್ಲಿನ ಹುಲಿ ಜನಸಂಖ್ಯೆಯು ಎದುರಿಸುತ್ತಿರುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಣೆ ಮಾಡಲಾಗುತ್ತದೆ. * ಮೊದಲ ವಿಶ್ವ ಹುಲಿ ದಿನವನ್ನು 2010 ರಲ್ಲಿ ರಷ್ಯಾದಲ್ಲಿ, ಸೇಂಟ್ ಪೀಟರ್ಸ್ಬರ್ಗ್ ಹುಲಿ ಶೃಂಗಸಭೆಯಲ್ಲಿ ಆಚರಿಸಿದ್ದಾರೆ, ಒಟ್ಟಾರೆ 13 ದೇಶಗಳು 2022 ರ ವೇಳೆಗೆ ಕಾಡು ಹುಲಿಗಳ ಸಂಖ್ಯೆಯನ್ನು ಹೆಚ್ಚಿಸುವ ಜಾಗತಿಕ ಗುರಿಯನ್ನು ಕೈಗೊಂಡಿವೆ. * 20 ನೇ ಶತಮಾನದ ಪ್ರಾರಂಭದಲ್ಲಿ ಸರಿ ಸುಮಾರು 1,00,000 ಹುಲಿಗಳಿದ್ದವು ಎಂದು ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (WWF) ತಿಳಿಸಿದೆ, ಆದರೆ 2010 ರ ಅವಧಿಯಲ್ಲಿ ಹುಲಿಗಳ ಸಂಖ್ಯೆಯು ತೀವ್ರವಾಗಿ 3,200 ಕ್ಕೆ ಕೆಳಮುಖವಾಗಿದೆ ಎಂದು ತಿಳಿಸಿದ್ದಾರೆ, ಈ ಕಾರಣದಿಂದಾಗಿ ಅಂತರರಾಷ್ಟ್ರೀಯ ಹುಲಿ ದಿನವು ಜಾಗೃತಿ & ಸಂರಕ್ಷಣೆ ಮಾಡಲು ಈ ದಿನವನ್ನು ಆಚರಿಸುತ್ತಾರೆ. * 2018 ರ ಅಖಿಲ ಭಾರತ ಹುಲಿ ಅಂದಾಜು ವರದಿಯ ಪ್ರಕಾರ ಭಾರತದಲ್ಲಿ 2967 ಹುಲಿಗಳಿವೆ ಎಂದು ತಿಳಿಸಲಾಗಿತ್ತು.