Job Description: * ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ನೈಸರ್ಗಿಕ ವಿಪತ್ತುಗಳ ಮೇಲ್ವಿಚಾರಣೆಗಾಗಿ ಬಳಸುವ ಉಪಗ್ರಹವನ್ನು ಉಡಾಯಿಸಲು ಸಿದ್ಧವಾಗುತ್ತಿದೆ. * ಇದು ಜಿಯೋ-ಇಮೇಜಿಂಗ್ ಉಪಗ್ರಹ, EOS-3 ಉಪಗ್ರಹವಾಗಿದೆ. * ಈ ಉಪಗ್ರಹವು ಚಂಡಮಾರುತಗಳು, ಪ್ರವಾಹ, ಹಾಗೂ ವಿವಿಧ ನೈಸರ್ಗಿಕ ವಿಕೋಪಗಳ ನೈಜ-ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ, ಹಾಗೂ ಈ ಉಪಗ್ರಹವು ದಿನಕ್ಕೆ ಕನಿಷ್ಠ 4 ರಿಂದ 5 ಬಾರಿ ದೇಶವನ್ನು ಚಿತ್ರಿಸುವ ಸಾಮರ್ಥ್ಯವನ್ನು ಕೂಡ ಹೊಂದಿದೆ. * ಈ ಉಪಗ್ರಹವನ್ನು 2021 ರ ನಾಲ್ಕನೇ ತ್ರೈಮಾಸಿಕದಲ್ಲಿ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲು ಯೋಜಿಸಿದೆ.