Job Description: * ರಾಷ್ಟ್ರೀಯ ಮಹಿಳಾ ಆನ್ಲೈನ್ ಚೆಸ್ ಪ್ರಶಸ್ತಿಯನ್ನು ದೆಹಲಿಯು ವಂತಿಕಾ ಅಗರ್ವಾಲ್ ಜಯಿಸಿದ್ದಾರೆ, ಇವರು ಈ ಆನ್ಲೈನ್ ಚೆಸ್ ಆಟದ 11 ಸುತ್ತುಗಳಲ್ಲಿ 9.5 ಅಂಕಗಳನ್ನು ಪಡೆದಿದ್ದಾರೆ. * ಪಶ್ಚಿಮ ಬಂಗಾಳದ ಅರ್ಪಿತಾ ಮುಖರ್ಜಿ ಅವರು 9 ಅಂಕಗಳನ್ನೂ ಪಡೆದುಕೊಂಡು 2 ನೇ ಸ್ಥಾನ ಪಡೆದುಕೊಂಡಿದ್ದಾರೆ. * ತಮಿಳುನಾಡಿನ ಶ್ರೀಜಾ ಶೇಷಾದ್ರಿ ಅವರು ಈ ಚೆಸ್ ಆಟದಲ್ಲಿ 8.5 ಅಂಕಗಳನ್ನೂ ಪಡೆದು 3 ನೇ ಸ್ಥಾನದಲ್ಲಿದ್ದಾರೆ. * ಮಹಾರಾಷ್ಟ್ರದ ಸೌಮ್ಯ ಸ್ವಾಮಿನಾಥನ್ ಅವರು 4 ನೇ ಸ್ಥಾನದಲ್ಲಿದ್ದಾರೆ. * ತಮಿಳುನಾಡಿನ ಆರ್ ವೈಶಾಲಿ ಅವರು 5 ನೇ ಸ್ಥಾನ ಪಡೆದಿದ್ದಾರೆ. * ಜೂನಿಯರ್ ಓಪನ್ ವಿಭಾಗದಲ್ಲಿ ತಮಿಳುನಾಡಿನ ವಿ.ಎಸ್.ರಾಹುಲ್ 9.5 ಅಂಕಗಳನ್ನೂ ಪಡೆದು ಮೊದಲನೇ ಸ್ಥಾನದಲ್ಲಿದ್ದಾರೆ. * ಅಂತರರಾಷ್ಟ್ರೀಯ ಮಾಸ್ಟರ್ ಭಾರತ್ ಸುಬ್ರಹ್ಮಣ್ಯಂ ಅವರು 9 ಅಂಕಗಳನ್ನೂ ಪಡೆದು 2 ನೇ ಸ್ಥಾನದಲ್ಲಿದ್ದಾರೆ. * ಗ್ರ್ಯಾಂಡ್ಮಾಸ್ಟರ್ ಪಿ ಇನಿಯಾನ್ 3 ನೇ ಸ್ಥಾನದಲ್ಲಿದ್ದಾರೆ, ಇತ್ತೀಚಿಗೆ ಇವರು ವಿಶ್ವಕಪ್ ಚೆಸ್'ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು.