Job Description: * ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ(KVIC)ವು ಗಡಿ ಭದ್ರತಾ ಪಡೆ (BSF) ಸಹಯೋಗದೊಂದಿಗೆ ಪ್ರಾಜೆಕ್ಟ್ ಬೋಲ್ಡ್ ಯೋಜನೆಯನ್ನು ಆರಂಭಿಸಿದೆ, ಈ ಯೋಜನೆಯಿಂದ ರಾಜಸ್ಥಾನದ ಭಾರತೀಯ ಮರುಭೂಮಿಗಳಲ್ಲಿ ಹಸಿರು ಹೊದಿಕೆಯನ್ನು ಅಭಿವೃದ್ಧಿಪಡಿಸುವ ಪ್ರಾಥಮಿಕ ಗುರಿಯಾಗಿದೆ ಎಂದು ತಿಳಿಸಲಾಗಿದೆ. * KVIC ಮತ್ತು BSF ಜೊತೆಗೆ ಪ್ರಾಜೆಕ್ಟ್ ಬೋಲ್ಡ್ ಅಡಿಯಲ್ಲಿ ರಾಜಸ್ಥಾನ ರಾಜ್ಯದ ಜೈಸಲ್ಮೇರ್ನ ತನೋಟ್ ಗ್ರಾಮದಲ್ಲಿ 1000 ಬಿದಿರಿನ ಸಸಿಗಳನ್ನು KVIC ಅಧ್ಯಕ್ಷರಾದ ಶ್ರೀ ವಿನಯ್ ಕುಮಾರ್ ಸಕ್ಸೇನಾ ಹಾಗೂ BSF ಡಿಜಿ ಶ್ರೀ ಸುರೇಂದ್ರ ಪನ್ವಾರ್ ಅವರ ಸಮ್ಮುಖದಲ್ಲಿ 2021 ರ ಜುಲೈ. 27 ರಂದು ನೆಟ್ಟಿದ್ದಾರೆ, ಹಾಗೂ ಈ ಸಸ್ಯಗಳ ನಿರ್ವಹಣೆಯನ್ನು BSF ನೋಡಿಕೊಳ್ಳಲಿದೆ. * ಪ್ರಾಜೆಕ್ಟ್ ಬೋಲ್ಡ್ ಯೋಜನೆಯು ಜೀವನೋಪಾಯವನ್ನು ಹಾಗೂ ಗ್ರಾಮೀಣ ಉದ್ಯಮಕ್ಕೆ ಬೆಂಬಲ ನೀಡುತ್ತದೆ, ಹಾಗೂ ಮರಳುಗಾರಿಕೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ ಎಂದಿದ್ದಾರೆ. * ಇದಕ್ಕೂ ಮೊದಲೇ ರಾಜಸ್ಥಾನದ ಉದಯಪುರ ಜಿಲ್ಲೆಯ ಬುಡಕಟ್ಟು ಗ್ರಾಮವಾದ ನಿಚ್ಲಾ ಮಾಂಡ್ವಾದಲ್ಲಿ ಜುಲೈ. 4 ರಂದು ಪ್ರಾಜೆಕ್ಟ್ ಬೋಲ್ಡ್ ಯೋಜನೆಯನ್ನು ಆರಂಭಿಸಲಾಗಿದೆ, ಈ ನಿಚ್ಲಾ ಮಾಂಡ್ವಾ ಗ್ರಾಮದಲ್ಲಿ 5000 ಬಿದಿರಿನ ಜಾತಿಗಳ ಸಸಿಗಳನ್ನು ನೆಟ್ಟಿದ್ದಾರೆ ಎಂದು ತಿಳಿದು ಬಂದಿದೆ.