Job Description: * ಪ್ರಸ್ತುತ ಭಾರತ ಸರ್ಕಾರವು 36 ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದವನ್ನು ಫ್ರಾನ್ಸ್ ದೇಶದೊಂದಿಗೆ ಮಾಡಿಕೊಂಡಿತ್ತು, ಅದರಲ್ಲಿ ಇದೀಗ 26 ರಫೇಲ್ ಯುದ್ಧ ವಿಮಾನಗಳನ್ನು ಭಾರತವು ಸ್ವೀಕಾರಮಾಡಿದೆ. * ಭಾರತ ದೇಶವು ಫ್ರಾನ್ಸ್ ದೇಶದ ಡಸಾಲ್ಟ್ ಏವಿಯೇಷನ್ ನಿಂದ 26 ಯುದ್ಧ ವಿಮಾನಗಳು ಸ್ವೀಕರಿಸಿದೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಅವರು ಲೋಕಸಭೆಯಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. * ಪ್ರಸ್ತುತ ಭಾರತ ದೇಶವು ಈ ಹಿಂದೆ ಫ್ರಾನ್ಸ್ ದೇಶದೊಂದಿಗೆ 59,000 ಕೋಟಿ ರೂ.ಗಳ ವೆಚ್ಚದಲ್ಲಿ 36 ಯುದ್ಧ ವಿಮಾನಗಳನ್ನು ಖರೀದಿಸಲು ಅಂತರ್-ಸರ್ಕಾರಿ ಒಪ್ಪಂದಕ್ಕೆ ಪರಸ್ಪರ ಒಪ್ಪಿ ಸಹಿ ಹಾಕಿದ್ದವು. * ಫ್ರಾನ್ಸ್ ದೇಶದ '5' ರಫೇಲ್ ಜೆಟ್ಗಳ ಮೊದಲ ಬ್ಯಾಚ್ 2020 ರ ಜುಲೈ. 29 ರಂದು ಭಾರತಕ್ಕೆ ಬಂದು ತಲುಪಿವೆ.