Job Description: * ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ 2021 ರ ಜುಲೈ. 27 ರಂದು ರಾಷ್ಟ್ರೀಯ ಮಹಿಳಾ ಆಯೋಗವು, ನ್ಯೂ ವುಮೆನ್ ಹೆಲ್ಪ್ ಲೈನ್(NCW) 24/7 ಸಹಾಯವಾಣಿ ಸಂಖ್ಯೆ "7827170170" ಯನ್ನು ಆರಂಭಿಸಿದ್ದಾರೆ. * ಪ್ರಸ್ತುತ ದೇಶದ ಮಹಿಳೆಯರ ಸುರಕ್ಷತೆಯನ್ನು ಕಾಪಾಡಲು, ಹಾಗೂ ಹಿಂಸಾಚಾರದಿಂದ ಬಳಲುತ್ತಿರುವ ಮಹಿಳೆಯರು, ಆಸ್ಪತ್ರೆಗಳು, ವೈದ್ಯರು, ಪೊಲೀಸ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮುಂತಾದ ಸೂಕ್ತ ಅಧಿಕಾರಿಗಳನ್ನೂ ಈ ಸಹಾಯವಾಣಿಯಿಂದ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಈ ಸಹಾಯವಾಣಿಯು ದೆಹಲಿಯಲ್ಲಿನ ರಾಷ್ಟ್ರೀಯ ಮಹಿಳಾ ಆಯೋಗವು ನಿರ್ವಹಿಸಲಿದೆ, ಈ ಸಹಾಯವಾಣಿಗೆ 18 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ಮಹಿಳೆಯಾರು ಕರೆಗಳನ್ನೂ ಮಾಡಿ ಸಹಾಯ ಪಡೆಯಬಹುದು. * ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಡಿಜಿಟಲ್ ಇಂಡಿಯಾ ಕಾರ್ಪೊರೇಶನ್ನ ಸಹಾಯದಿಂದ ಈ ಸಹಾಯವಾಣಿಯನ್ನು ಅಭಿವೃದ್ಧಿಪಡಿಸಲಾಗಿದೆ. * 1992 ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು (NCW) ರಚನೆಯಾದ ಸರ್ಕಾರದ ಶಾಸನಬದ್ಧ ಸಂಸ್ಥೆಯಾಗಿದೆ, ಪ್ರಸ್ತುತ ರೇಖಾ ಶರ್ಮಾ ಅವರು ಈ NCW ನ ಅಧ್ಯಕ್ಷೆಯಾಗಿದ್ದಾರೆ.