Job Description: * ಟೋಕಿಯೊ ಒಲಿಂಪಿಕ್ಸ್ ನ ರೋಯಿಂಗ್ನ ಪುರುಷರ ಡಬಲ್ಸ್ ಸ್ಕಲ್ಸ್ ವಿಭಾಗದಲ್ಲಿ ಕ್ರೊವೇಷಿಯಾದ ಸಹೋದರರಾಗಿರುವ ಮಾರ್ಟಿನ್ ಸಿನ್ಕೊವಿಕ್ ಮತ್ತು ವ್ಯಾಲೆಂಟ್ ಸಿನ್ಕೊವಿಕ್ ಅವರು ಚಿನ್ನದ ಪದಕ ಪಡೆದುಕೊಂಡಿದ್ದಾರೆ. * ಈ ಹಿಂದೆ 2012 ರ ಕ್ರೀಡಾ ಕೂಟದಲ್ಲಿ ಕ್ವಾಡ್ರುಪ್ಲೆ ಸ್ಕಲ್ಸ್ ವಿಭಾಗದಲ್ಲಿ ಇದೇ ಜೋಡಿಯು ಬೆಳ್ಳಿ ಪದಕವನ್ನು ಜಯಿಸಿದ್ದರು. * ಐರ್ಲೆಂಡ್ನ ಸನಿತಾ ಪುಸ್ಪೆರ್ ಅವರು 2018 ಮತ್ತು 2019 ರ ವಿಶ್ವ ಚಾಂಪಿಯನ್ಷಿಪ್, 2019 ಹಾಗೂ 2020 ರ ಯರೋಪಿಯನ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದರು, ಆದರೆ ಈ ಟೋಕಿಯೊ ಒಲಿಂಪಿಕ್ಸ್'ನಲ್ಲಿ ಫೈನಲ್ ಪ್ರವೇಶ ಪಡೆಯುವಲ್ಲಿ ವಿಫಲರಾಗಿದ್ದಾರೆ. * ಕ್ರೊವೇಷಿಯಾ ತಂಡ 6 ನಿಮಿಷ 15.29 ಸೆಕೆಂಡ್ಗಳಲ್ಲಿ 2 ಸಾವಿರ ಮೀಟರ್ ದೂರ ಕ್ರಮಿಸಿ ಚಿನ್ನದ ಪದಕವನ್ನು ಪಡೆದುಕೊಂಡಿದೆ. * ರೊಮೆನಿಯಾ ತಂಡ 6 ನಿಮಿಷ.17.58 ಸೆಕೆಂಡ್ಗಳಲ್ಲಿ ಕ್ರಮಿಸಿ ಬೆಳ್ಳಿ ಪದಕವನ್ನು ಪಡೆದುಕೊಂಡಿದೆ.