Job Description: * ಕೇಂದ್ರ ಸರ್ಕಾರವು ಸಂಸತ್ತಿಗೆ ವರದಿಯನ್ನು ನೀಡಿರುವ ಪ್ರಕಾರ ಭಾರತ ದೇಶವು ಈ ವರ್ಷದ ಪ್ರಾರಂಭದಲ್ಲಿ ಅಂದರೆ ಜನೇವರಿ 12 ರಿಂದ ಜುಲೈ 22ರ ಸಮಯದಲ್ಲಿ ಒಟ್ಟಾರೆ 6.4 ಕೋಟಿ ಕೋವಿಡ್-19 ಲಸಿಕೆಗಳನ್ನು ವಿದೇಶಗಳಿಗೆ ಕಳುಹಿಸಿಕೊಟ್ಟಿದೆ ಎಂದು ತಿಳಿಸಿದೆ. * ವಿಮಾನಗಳ ಮೂಲಕ ಒಟ್ಟು 42.2 ಕೋಟಿ ಡೋಸ್ ಕೋವಿಡ್-19 ಲಸಿಕೆಗಳನ್ನು ರವಾನಿಸಲಾಗಿದೆ ಎಂದು ನಾಗರಿಕ ವಿಮಾನಯನ ಸಚಿವ ವಿ.ಕೆ.ಸಿಂಗ್ ಅವರು ಲೋಕಸಭೆಯಲ್ಲಿ ಈ ವಿಷಯದ ಬಗ್ಗೆ ಲಿಖಿತ ಉತ್ತರ ರೂಪದಲ್ಲಿ ಮಾಹಿತಿ ನೀಡಿದ್ದಾರೆ. * ಪ್ರಸ್ತುತ ದೇಶದಾದ್ಯಂತ 45 ಕೋಟಿಗೂ ಅಧಿಕವಾಗಿ ಕೋವಿಡ್-19 ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.