Job Description: * ಪ್ರಸ್ತುತ ಕರ್ನಾಟಕ ರಾಜ್ಯವು ತನ್ನ ಎಲ್ಲ ಸರ್ಕಾರಿ ಸೇವೆಗಳಲ್ಲಿ ಶೇ.1ರಷ್ಟು ಮೀಸಲಾತಿಯನ್ನು 'ತೃತೀಯ ಲಿಂಗಿ' ಸಮುದಾಯಕ್ಕೆ ನೀಡಿದೆ. * ಪ್ರಸ್ತುತ 'ತೃತೀಯ ಲಿಂಗಿ'ಗಳಿಗೆ ಮೀಸಲಾತಿಯನ್ನು ನೀಡಿದ ಕರ್ನಾಟಕವು ದೇಶದ ಮೊದಲ ರಾಜ್ಯವಾಗಿದೆ, 1977 ರ ಕರ್ನಾಟಕ ನಾಗರಿಕ ಸೇವಾ ನೇಮಕಾತಿ ನಿಯಮದ ತಿದ್ದುಪಡಿ ಮಾಡಿದ ನಂತರ ಈ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ. * ಈ ಹಿಂದೆ ಜುಲೈ. 6 ರಂದು ಹೊರಡಿಸಲಾಗಿರುವ ಅಂತಿಮ ಅಧಿಸೂಚನೆಯು ಪ್ರಕಾರ ಎಲ್ಲಾ ಸಾಮಾನ್ಯ ಮತ್ತು ತೃತೀಯ ಲಿಂಗದ ಮೀಸಲು ವರ್ಗಗಳಲ್ಲಿ ಶೇ.1 ರಷ್ಟು ಮೀಸಲಾತಿಯನ್ನ ನಿರ್ದಿಷ್ಟ ಪಡಿಸಲಾಗುತ್ತದೆ, ಹಾಗೂ ರಾಜ್ಯದ ಸರ್ಕಾರಿ ಉದ್ಯೋಗಗಳಿಗೆ ಅರ್ಜಿಗಳನ್ನ ಆಹ್ವಾನಿಸುವ ಅಧಿಸೂಚನೆ ಪ್ರಕಟವಾದ ಎಲ್ಲ ಸಂಧರ್ಭದಲ್ಲಿ ತೃತೀಯ ಲಿಂಗದ ಅಂಕಣವನ್ನ ಪುರುಷ ಮತ್ತು ಮಹಿಳಾ ಅಂಕಣಗಳೊಂದಿಗೆ ಸೇರಿಸಬೇಕು ಎಂದು ಅಧಿಸೂಚನೆ ಹೊಡಿಸಲಾಗಿದೆ.