Job Description: * ಸದ್ಯದ ಪರಿಸ್ಥಿತಿಯಲ್ಲಿ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಪೈಪೋಟಿ ನಡೆಯುತ್ತಿದೆ, ಪ್ರಸ್ತುತ ಚೀನಾ , ತೈವಾನ್, ದಕ್ಷಿಣ ಕೊರಿಯಾದ ಸ್ಮಾರ್ಟ್ಫೋನ್ ತಯಾರಿಕ ಕಂಪನಿಗಳ ನಡುವೆ ಎಲ್ಲಿಲ್ಲದ ಪೈಪೋಟಿ ನಡೆಯುತ್ತಿದೆ, ಇದರ ಮಧ್ಯೆ ಇದೀಗ ಚೀನಾದ ಪ್ರಮುಖ ಸ್ಮಾರ್ಟ್ಫೋನ್ ತಯಾರಕ ಕಂಪನಿಯಾಗಿರುವ ಶಿಯೋಮಿ ಇದೀಗ ಐಫೋನ್'ನ್ನು ಹಿಂದಿಕ್ಕಿದೆ. * 2021 ರ ಎರಡನೇ ತ್ರೈಮಾಸಿಕದಲ್ಲಿ ಶಿಯೋಮಿ ಫೋನ್ ಮಾರಾಟದ ದೃಷ್ಟಿಯಿಂದ ಜಾಗತಿಕವಾಗಿ 2 ನೇ ಅತಿದೊಡ್ಡ ಸ್ಮಾರ್ಟ್ಫೋನ್ ತಯಾರಕ ಸಂಸ್ಥೆಯಾಗಿದೆ ಎಂದು ಕ್ಯಾನಲಿಸ್ ಇತ್ತೀಚಿಗೆ ವರದಿ ಮಾಡಿದೆ. * ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ತಯಾರಕ ದಕ್ಷಿಣ ಕೊರಿಯಾ ರಾಷ್ಟ್ರವು ಶೇಕಡಾ 19 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ, ಈಗಿನ 2ನೇ ಅತಿದೊಡ್ಡ ಸ್ಮಾರ್ಟ್ಫೋನ್ ತಯಾರಕ ಸಂಸ್ಥೆ ಶಿಯೋಮಿ ಶೇಕಡಾ 17 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. * ಪ್ರಸ್ತುತ ಶಿಯೋಮಿಯ ಸ್ಮಾರ್ಟ್ಫೋನ್ ಮಾರಾಟವು ಲ್ಯಾಟಿನ್ ಅಮೆರಿಕಾದಲ್ಲಿ ಶೇ. 300 ಕ್ಕಿಂತ ಹೆಚ್ಚಿದೆ, ಆಫ್ರಿಕಾದಲ್ಲಿ ಶೇ. 150 ರಷ್ಟಿದೆ ಹಾಗೂ ಪಶ್ಚಿಮ ಯುರೋಪಿನಲ್ಲಿ ಶೇ. 50 ರಷ್ಟಿದೆ .