Job Description: * ಭಾರತದ 20 ಲಕ್ಷಕ್ಕೂ ಹೆಚ್ಚು ವಾಟ್ಸ್ಆಯಪ್ ಖಾತೆಗಳನ್ನು ಮೇ ಮತ್ತು ಜೂನ್ ಅವಧಿಯಲ್ಲಿ ನಿರ್ಬಂಧಿಸಿರುವುದಾಗಿ ಸಂಸ್ಥೆ ತಿಳಿಸಿದೆ. * ವಾಟ್ಸ್ಆಯಪ್ ಸಂಸ್ಥೆಯ ನಿಯಮಗಳ ಉಲ್ಲಂಘನೆಯ ಕಾರಣದಿಂದಾಗಿ ಸಂಸ್ಥೆ ನಿರ್ಬಂಧ ಹೇರಿದೆ ಎನ್ನಲಾಗಿದೆ. * ಪ್ರಸ್ತುತ ಶೇಕಡಾ 95 ರಷ್ಟು ಖಾತೆಗಳು ಭಾರತದಲ್ಲಿ ನಿಗದಿಪಡಿಸಲಾಗಿರುವ ನಿಯಮ ಅಥವಾ ಫಾರ್ವರ್ಡ್ ಮಿತಿಯನ್ನು ಉಲ್ಲಂಘಿಸಿದ ಕಾರಣದಿಂದ ನಿರ್ಬಂಧ ಹೇರಲಾಗಿದೆ ಎಂದು ವಾಟ್ಸ್ಆಯಪ್ ತಿಳಿಸಿದೆ. * ಈ ವಾಟ್ಸ್ಆಯಪ್ ಸಂಸ್ಥೆಯ ನಿರ್ಬಂಧದ ಮಾಹಿತಿಯು ಅಂತರರಾಷ್ಟ್ರೀಯ 'BBC' ಸುದ್ದಿ ಮಾಧ್ಯಮ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. * ಪ್ರಸ್ತುತ ಮೇ 15 ಮತ್ತು ಜೂನ್ 15 ರ ನಡುವಿನ ಅವಧಿಯಲ್ಲಿ 20 ಲಕ್ಷಕ್ಕೂ ಹೆಚ್ಚು ಖಾತೆಗಳು ನಿರ್ಬಂಧಕ್ಕೆ ಒಳಗಾಗಿವೆ ಎಂದು ತಿಳಿಸಲಾಗಿದೆ. * ಈ ವಾಟ್ಸ್ಆಯಪ್ ಸಂಸ್ಥೆಯ ಭಾರತದಲ್ಲಿ ಸುಮಾರು 40 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿದೆ. * ಪ್ರಸ್ತುತ ಭಾರತದಲ್ಲಿನ ವಾಟ್ಸ್ಆಯಪ್ ಖಾತೆಗಳಿಂದ ಅನಗತ್ಯ ಸಂದೇಶಗಳು ಅಧಿಕ ಪ್ರಮಾಣದಲ್ಲಿ ರವಾನೆಯಾಗುವುದನ್ನು ತಡೆಯುವ ಕಾರಣದಿಂದ ಈ ನಿರ್ಬಂಧವನ್ನು ಹೇರಲಾಗಿದೆ ಎಂದು ಫೇಸ್ಬುಕ್ ಒಡೆತನದ ಮೆಸೆಜಿಂಗ್ ಆಯಪ್ ಮಾಹಿತಿ ನೀಡಿದೆ. * ವಾಟ್ಸ್ಆಯಪ್ ಮೆಷಿನ್ ಲರ್ನಿಂಗ್ ತಂತ್ರಜ್ಞಾನದ ಮೂಲಕ ಪ್ರತಿ ತಿಂಗಳು ವಿಶ್ವದಾದ್ಯಂತ '8' ದಶಲಕ್ಷ ಖಾತೆಗಳ ಮೇಲೆ ನಿರ್ಬಂಧ ಹೇರುತ್ತದೆ ಎಂಬ ವರದಿ ಪ್ರಕಟವಾಗಿದೆ.