Job Description: * ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತುತ ಉತ್ತರ ಪ್ರದೇಶ ರಾಜ್ಯಕ್ಕಾಗಿ ಗೋವಾ ಶಿಪ್ ಯಾರ್ಡ್ ವತಿಯಿಂದ ನಿರ್ಮಿಸಲಾಗಿರುವ ಪ್ರವಾಸಿ ಹಡಗಿನ ಓಡಾಟಕ್ಕೆ ವೀಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಿದರು. * ಈ ಪ್ರವಾಸಿ ಹಡಗು ತನ್ನ ಸಂಚಾರವನ್ನು ಗಂಗಾ ನದಿಯ ರಾಜಘಾಟ್, ರವಿದಾಸ್ ಘಾಟ್ ಹಾಗೂ ಆಸಿ ಘಾಟ್ನಲ್ಲಿ ಆರಂಭಿಸಲಿದೆ. * ಈ ಹಿಂದೆ '20 ಎಂ ವಾರಣಾಸಿ ಫೆರಿ' ಹಡಗನ್ನು ನಿರ್ಮಿಸಲು ಗೋವಾ ಶಿಪ್ ಯಾರ್ಡ್ ನೊಂದಿಗೆ ಉತ್ತರ ಪ್ರದೇಶ ರಾಜ್ಯವು ನಿರ್ಮಾಣ ನಿಗಮ್ ಕರಾರುನ್ನು 2019 ರ ಫೆಬ್ರುವರಿ. 14 ರಂದು ಮಾಡಿಕೊಂಡಿತ್ತು. * ವಾರಣಾಸಿಯ ಪ್ರವಾಸಿ ಹಡಗು ಸುಮಾರು 80 ಪ್ರವಾಸಿಗರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.