Job Description: * ಪ್ರಸ್ತುತ ಇದೇ ಜುಲೈ. 21 ರಂದು ಆಚರಣೆ ಮಾಡಲಾಗುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಜಮ್ಮು- ಕಾಶ್ಮೀರದಾದ್ಯಂತ ಹಸು, ಕರು ಹಾಗೂ ಒಂಟೆಗಳ ಹತ್ಯೆಯನ್ನು ನಿಷೇಧಿಸಲಾಗಿದೆ ಎಂದು ಅಲ್ಲಿನ ಆಡಳಿತ ಆದೇಶ ಹೊರಡಿಸಿದೆ. * ಈ ಆದೇಶವನ್ನು ಜಮ್ಮು- ಕಾಶ್ಮೀರದ ಪ್ರಾಣಿ ಸಾಕಾಣಿಕೆ ಮತ್ತು ಮೀನುಗಾರಿಕೆ ಇಲಾಖೆಯ ಯೋಜನಾ ನಿರ್ದೇಶಕರು ಹೊರಡಿಸಿದ್ದಾರೆ. * ಪ್ರಸ್ತುತ ಜಮ್ಮು-ಕಾಶ್ಮೀರದಾದ್ಯಂತ ಈ ಬಕ್ರೀದ್ ಹಬ್ಬದ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಪ್ರಾಣಿಗಳು ಹತ್ಯೆಯಾಗುವ ಸಾಧ್ಯತೆ ಇದೆ ಎಂಬ ಕಾರಣದಿಂದ ಪ್ರಾಣಿ ಕಲ್ಯಾಣ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದೆ ಅಲ್ಲದೆ ಅಲ್ಲಿನ ಎಲ್ಲ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ತಿಳಿಸಿದೆ.