Job Description: * ಇದೀಗ ಅಮೆರಿಕ ನೌಕಾಪಡೆಯು 2 'MRH-60' ಆರ್ ಮಲ್ಟಿ ರೋಲ್ ಹೆಲಿಕಾಪ್ಟರ್ಗಳನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಿದೆ, ಇದರಿಂದಾಗಿ ಭಾರತ-ಅಮೆರಿಕ ರಕ್ಷಣಾ ಸಂಬಂಧವು ಇನ್ನಷ್ಟು ಬಲಗೊಂಡಂತಾಗಿದೆ. * ಪ್ರಸ್ತುತ ಭಾರತೀಯ ನೌಕಾಪಡೆಯು ಅಮೆರಿಕ ಸರ್ಕಾರದ ಮಿಲಿಟರಿ ಉಪಕರಣದ ಮಾರಾಟದ ಅಡಿಯಲ್ಲಿ 2.4 ಬಿಲಿಯನ್ ಡಾಲರ್ ವೆಚ್ಚದಲ್ಲಿ, ಅಮೇರಿಕದ ಲಾಕ್ಹೀಡ್ ಮಾರ್ಟಿನ್ ಕಂಪನಿ ತಯಾರಿಸುತ್ತಿರುವ 24 ಹೆಲಿಕಾಪ್ಟರ್ಗಳನ್ನು ಖರೀದಿ ಮಾಡುತಿದ್ದೆ. * ಪ್ರಸ್ತುತ ಭಾರತ ಮತ್ತು ಅಮೆರಿಕದ ದ್ವಿಪಕ್ಷೀಯ ರಕ್ಷಣಾ ಸಂಬಂಧಗಳಲ್ಲಿ ಈ ಆಲ್-ವೆದರ್ ಮಲ್ಟಿ ರೋಲ್ ಹೆಲಿಕಾಪ್ಟರ್ಗಳು ಒಂದು ಪ್ರಮುಖ ಮೈಲಿಗಲ್ಲಾಗಿವೆ ಎಂದು ತಿಳಿಸಿದ್ದಾರೆ, ಸುಮಾರು 2 ವರ್ಷಗಳಲ್ಲಿ ದ್ವಿಪಕ್ಷೀಯ ರಕ್ಷಣಾ ವ್ಯಾಪಾರವು 20 ಬಿಲಿಯನ್ ಡಾಲರ್ಗಳಿಗೆ ಏರಿಕೆಯಾಗಿದೆ ಎಂದು ತಿಳಿಸಲಾಗಿದೆ. * MRH -60 ಹೆಲಿಕಾಪ್ಟರ್ ಎಲ್ಲಾ ಹವಾಮಾನದಲ್ಲಿ ಬಳಸಬಹುದಾದ ಹೆಲಿಕಾಪ್ಟರ್ ಆಗಿದೆ. ಈ ಹೆಲಿಕಾಪ್ಟರ್ಗಳ ಚಾಲನೆಯ ಭಾರತೀಯ ನೌಕಾಪಡೆಯ ಸಿಬ್ಬಂದಿಗಳ ಮೊದಲ ಬ್ಯಾಚ್ ಇದೀಗ ಅಮೆರಿಕದಲ್ಲಿ ತರಬೇತಿ ಪಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.