Job Description: * ಇತ್ತೀಚಿಗೆ ದಿನಗಳಲ್ಲಿ ಚೀನಾ ಮತ್ತು ಅಮೇರಿಕ ದೇಶಗಳ ನಡುವಿನ ಸಂಬಂಧ ಹದಗೆಡುತ್ತಿದ್ದು, ಈ ಕಾರಣದಿಂದಾಗಿ ಅಮೇರಿಕ ರಾಷ್ಟ್ರವು ಜರ್ಮನಿ ರಾಷ್ಟ್ರದೊಂದಿಗೆ ಸಂಬಂಧ ಬೆಳೆಸಲು ಸಿದ್ಧವಾಗಿದೆ. * ಅಮೆರಿಕಾದ ಅಧ್ಯಕ್ಷ ಜೋ ಬಿಡೇನ್ ಹಾಗೂ ಜರ್ಮನ್ನ ಏಂಜೆಲ್ ಮಾರ್ಕೆಲ್ ಅವರು ಶ್ವೇತಭವನದಲ್ಲಿ ದ್ವಿಪಕ್ಷಿಯ ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆಯನ್ನು ನಡೆಸಿದರು. * ಇತ್ತೀಚಿನ ದಿನಗಳಲ್ಲಿ ಚೀನಾ ದೇಶವು ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿಲ್ಲ ಎಂದು ಅಮೇರಿಕ ಅಧ್ಯಕ ಜೋ ಬಿಡೆನ್ ಅವರು ಆರೋಪಿಸಿದ್ದಾರೆ, ಹಾಗೂ ಚೀನಾದಲ್ಲಿನ ಅಲ್ಪಸಂಖ್ಯಾತರನ್ನು ತೊಂದರೆ ಅನುಭವಿಸುವಂತೆ ಮಾಡುತ್ತಿದ್ದೆ ಎಂದು ಆರೋಪ ಮಾಡಿದ್ದಾರೆ. * ದ್ವಿಪಕ್ಷೀಯ ಒಪ್ಪಂದದ ಸಭೆಯಿಂದಾಗಿ ಚೀನಾ ದೇಶದಿಂದ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಉಭಯ ದೇಶಗಳು ಚರ್ಚೆ ಮಾಡಿವೆ ಎಂದು ತಿಳಿದು ಬಂದಿದೆ, ಇದರ ಜೊತೆಯಲ್ಲಿ ಚೀನಾ ದೇಶದ ಉತ್ಪಾದನಾ ಮಾರುಕಟ್ಟೆಯನ್ನು ಆವರಿಕೊಳ್ಳಲು ಸಿದ್ಧವಾಗಿದ್ದೇವೆ ಎಂದು ತಿಳಿಸಿದ್ದಾರೆ. * ಜರ್ಮನ್ ಮತ್ತು ಅಮೆರಿಕಾ ದೇಶಗಳು ಈ ದ್ವಿಪಕ್ಷಿಯ ಒಪ್ಪಂದದಿಂದ ಆರ್ಥಿಕ, ಹವಾಮಾನ ಬದಲಾವಣೆ, ರಕ್ಷಣೆ ಮತ್ತು ಸೇನಾ ಕ್ಷೇತ್ರದಲ್ಲಿ ಪರಸ್ಪರ ಒಪ್ಪಿಕೊಂಡು ಕೈಜೋಡಿಸಲಿವೆ, ಹಾಗೂ ಚೀನಾಕ್ಕಿಂತಲೂ ಉನ್ನತಮಟ್ಟದಲ್ಲಿ ವಹಿವಾಟು ನಡೆಸಲು ಸಿದ್ಧವಾಗಿದ್ದೇವೆ ಎಂದು ತಿಳಿಸಿದ್ದಾರೆ.