Job Description: * ಪ್ರಸ್ತುತ ಕೇದ್ರ ಸರ್ಕಾರವು ನಾವೀನ್ಯತೆ, ಉದ್ಯಮಶೀಲತೆ, ಐಪಿಆರ್, ವಿನ್ಯಾಸ ಚಿಂತನೆ, ಉತ್ಪನ್ನ ಅಭಿವೃದ್ಧಿ ಹಾಗೂ ಕಲ್ಪನೆ ಉತ್ಪಾದನೆ ಕುರಿತು ಸುಮಾರು 50,000 ಶಾಲಾ ಶಿಕ್ಷಕರಿಗೆ ಶಾಲಾ ನಾವೀನ್ಯತೆ ರಾಯಭಾರಿ ತರಬೇತಿ ಕಾರ್ಯಕ್ರಮವನ್ನು ಆರಂಭಿಸಿದೆ. * ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರು ಈ ನಾವಿನ್ಯತೆ ರಾಯಭಾರಿ ತರಭೇತಿ ಕಾರ್ಯಕ್ರಮವನ್ನು ಜಂಟಿಯಾಗಿ ಆರಂಭಿಸಿದರು. * ದೇಶಾದ್ಯಂತದ ಶಾಲಾ ಶಿಕ್ಷಕರು ಮತ್ತು ದೇಶದ ಶೈಕ್ಷಣಿಕ ಮಂಡಳಿಗಳಿಗಾಗಿ ಶಿಕ್ಷಣ ಸಚಿವಾಲಯದ ಇನ್ನೋವೇಶನ್ ಸೆಲ್ ಈ ನಾವಿನ್ಯತೆ ರಾಯಭಾರಿ ತರಭೇತಿ ಕಾರ್ಯಕ್ರಮವನ್ನು ಪರಿಕಲ್ಪನೆಯನ್ನು ಆರಂಭಿಸಿದೆ. * ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಹಾಗೂ ಸಿಬಿಎಸ್ಇ(CBSE)ಸಹಯೋಗದೊಂದಿಗೆ ಶಿಕ್ಷಣ ಸಚಿವಾಲಯದ ಇನ್ನೋವೇಶನ್ ಸೆಲ್ ಜಂಟಿಯಾಗಿ ಈ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದ್ದೆ. * ಪ್ರಸ್ತುತ ಸಿಬಿಎಸ್ಇ ಮತ್ತು ಏಕಲವ್ಯ ಮಾದರಿ ವಸತಿ ಶಾಲೆಗಳ 50,000 ಶಾಲಾ ಶಿಕ್ಷಕರಿಗೆ ಈ ಶಾಲಾ ನಾವೀನ್ಯತೆ ರಾಯಭಾರಿ ತರಬೇತಿ ಕಾರ್ಯಕ್ರಮವು ತರಬೇತಿ ನೀಡಲಿದೆ ಎಂದು ತಿಳಿಸಿದ್ದಾರೆ.