Job Description: * ಭಾರತೀಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ದುಬೈ ಗೋಲ್ಡನ್ ವೀಸಾ ಪಡೆದುಕೊಂಡಿದ್ದಾರೆ, ಈ ವೀಸಾದಿಂದಾಗಿ ಸಾನಿಯಾ ಮತ್ತು ಅವರ ಪತಿಯಾಗಿರುವ ಶೋಯಬ್ ಮಲಿಕ್ ಅವರು 10 ವರ್ಷಗಳ ಕಾಲ ಯುಎಇ ನಿವಾಸಿಯಾಗಬಹುದಾಗಿದೆ. * ಸಾನಿಯಾ ಮಿರ್ಜಾ ಅವರು ಪತಿ ಪಾಕಿಸ್ತಾನದ ಕ್ರಿಕೆಟ್ ತಂಡದ ಮಾಜಿ ನಾಯಕರಾಗಿದ್ದಾರೆ. * ಈ ಮೊದಲು ದುಬೈ ಗೋಲ್ಡನ್ ವೀಸಾ ಬಾಲಿವುಡ್ ನಟರಾದ ಶಾರೂಖ್ ಖಾನ್ ಹಾಗೂ ಸಂಜಯ್ ದತ್ ಅವರು ಪಡೆದುಕೊಂಡಿದ್ದಾರೆ, ಇದೀಗ ದುಬೈ ಗೋಲ್ಡನ್ ವೀಸಾ ಪಡೆದ 3 ನೇ ಭಾರತೀಯ ಪ್ರಜೇ ಸಾನಿಯಾ ಮಿರ್ಜಾ ಅವರಾಗಿದ್ದಾರೆ. * ಪ್ರಸ್ತುತ ದುಬೈನಲ್ಲಿ ಟೆನಿಸ್ ಹಾಗೂ ಕ್ರಿಕೆಟ್ ತರಬೇತಿ ಅಕಾಡೆಮಿಯನ್ನು ಪ್ರಾರಂಭಿಸಲು ಸಾನಿಯಾ ಹಾಗೂ ಶೋಯಬ್ ಅವರು ಮುಂದಾಗಿದ್ದಾರೆ. * ಸಾನಿಯಾ ಮಿರ್ಜಾ ಅವರು ಈ ಬಾರಿಯ ಟೋಕಿಯೊ ಒಲಿಂಪಿಕ್ಸ್ನಲ್ಲಿ ಮಹಿಳಾ ಡಬಲ್ಸ್ ವಿಭಾಗದಲ್ಲಿ ಅಂಕಿತಾ ರೈನಾ ಅವರೊಂದಿಗೆ ಆಟವಾಡಲಿದ್ದಾರೆ.