Job Description: * ಸಾರ್ವಜನಿಕ ಸಾರಿಗೆ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯದ ಪ್ರಮುಖ ನಗರಗಳಲ್ಲಿ ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ-2021 ನ್ನು ರಾಜ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚಾಲನೆ ನೀಡಿದರು. * ಪ್ರಸ್ತುತ 2021 ರ ಈ ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ ಜಾರಿತರುವದರಿಂದ ಸ್ವಯಂ-ಉದ್ಯೋಗ, ಪರಿಸರ ಸ್ನೇಹಿ ವಾತಾವರಣಕ್ಕೆ ಉತ್ತೇಜನ ನೀಡಿದಂತಾಗುತ್ತದೆ, ಹಾಗೂ ಇಂಧನ ಸಂರಕ್ಷಣೆ, ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಸಿಎಂ BSY ತಿಳಿಸಿದ್ದಾರೆ. * ಬೈಕ್ ಟ್ಯಾಕ್ಸಿ ಬಳಕೆ ಪ್ರಯಾಣಿಕರ ಸಂಚರಿವು ಮಾರ್ಗವು 10 ಕಿ.ಮೀ ಗಿಂತ ಹೆಚ್ಚಿಗೆ ಇರಬಾರದು, ಜೊತೆಗೆ ಬೈಕ್ ಟ್ಯಾಕ್ಸಿ ಸಂಚಾರದ ಮಾರ್ಗಕ್ಕೆ ಅವಕಾಶ ನೀಡಬೇಕು ಎಂಬುದನ್ನು ಪ್ರಾಧಿಕಾರವು ಕಾಲ ಕಾಲಕ್ಕೆ ನಿರ್ಣಯವನ್ನು ತಗೆದುಕೊಳ್ಳುತ್ತದೆ. * ಈ ಯೋಜನೆಯಿಂದಾಗಿ ಬೆಂಗಳೂರಿನಲ್ಲಿನ ಸಂಚಾರ ದಟ್ಟಣೆಯಿಂದಾಗಿ ಸರಿಯಾದ ಸಮಯಕ್ಕೆ ನಿಗದಿತ ಪ್ರದೇಶವನ್ನು ತಲುಪುದಕ್ಕೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ, ಈ ಯೋಜನೆಯಿಂದ ಪ್ರಯಾಣದ ಸಮಯ ಉಳಿಯುತ್ತದೆ, ಹಾಗೂ ರೈಲ್ವೆ ನಿಲ್ದಾಣ, ಮೆಟ್ರೋ ನಿಲ್ದಾಣ ತಲುಪುವುದಕ್ಕೆ ಸಹಾಯಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.