Job Description: * ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿನ ಐಐಟಿ- ಬಿಎಚ್ಯು ಮೈದಾನದಲ್ಲಿ ಸುಮಾರು 1,500 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು, ಇದರ ಜೊತೆಯಲ್ಲಿ ಕೆಲ ಹೊಸ ಯೋಜನೆಗಳಿಗೆ ಶಂಕುಸ್ಥಾಪನೆಯನ್ನು ನೆರವೇರಿಸಿದರು. * ವಾರಾಣಸಿಯು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಕ್ಷೇತ್ರವಾಗಿದ್ದು, ಇಲ್ಲಿಗೆ ಆಗಮಿಸಿ ಬಿಎಚ್ಯು'ನಲ್ಲಿ 100 ಹಾಸಿಗೆಗಳ ವಿಭಾಗ ಹಾಗೂ ಗೋದೌಲಿಯಲ್ಲಿ ಬಹುಮಹಡಿ ಪಾರ್ಕಿಂಗ್ ಸ್ಥಳವನ್ನು ಉದ್ಘಾಟಣೆ ಮಾಡಿದರು, ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯ ಅಂಗವಾಗಿ ಗಂಗಾನದಿಯಲ್ಲಿ ರೋರೋ ದೋಣಿಗಳಿಗೆ ಚಾಲನೆಯನ್ನು ನೀಡಿದರು, ಅಂತಿಮವಾಗಿ ವಾರಾಣಸಿ ನಗರದಲ್ಲಿನ ಗಾಜಿಯಾಪುರ ಹೆದ್ದಾರಿ ಸಂಪರ್ಕಿಸುವ ತ್ರಿಪಥ ಮೇಲು ಸೇತುವೆಯನ್ನು ಉದ್ಘಾಟಣೆ ಮಾಡಿದರು. * ಶ್ರೀಯುತ ಪ್ರಧಾನಿ ಮೋದಿಯವರು ಸುಮಾರು 744 ಕೋಟಿ ರೂ. ಮೊತ್ತದ ಯೋಜನೆಗಳನ್ನು ಉದ್ಘಾಟಣೆ ಮಾಡುವದರ ಜೊತೆಗೆ, ಸುಮಾರು 839 ಕೋಟಿ ರೂ. ಮೊತ್ತದ ಕೆಲ ಲೋಕೋಪಯೋಗಿ ಇಲಾಖೆಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. * ಈ ಅಭಿವೃದ್ಧಿ ಯೋಜನೆಗಳ ಕಾರ್ಯಕ್ರಮಗಳು ಮುಕ್ತಾಯದ ನಂತರ ನರೇಂದ್ರ ಮೋದಿಯವರು ಜಪಾನ್ ಸರ್ಕಾರದ ನೆರವಿನಿಂದ ನಿರ್ಮಾಣ ಮಾಡಲಾಗಿರುವ ಅಂತರರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರವಾಗಿರುವ "ರುದ್ರಾಕ್ಷ"ವನ್ನು ಉದ್ಘಾಟಣೆ ಮಾಡಿದರು.