Job Description: * ಮೊದಲ ಮಾನವ ಬಾಹ್ಯಾಕಾಶ ಕಾರ್ಯಾಚರಣೆ ಗಗನಯಾನದ ಕಾರ್ಯಾಚರಣೆಯಲ್ಲಿ ದ್ರವ ಇಂಧನ ಚಾಲಿತ ವಿಕಾಸ್ ಎಂಜಿನ್ʼನ 3ನೇ ದೀರ್ಘಾವಧಿಯ ಬಿಸಿ ಪರೀಕ್ಷೆಯನ್ನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಯಶಸ್ವಿಯಾಗಿ ನಡೆಸಿ ಮತ್ತೊಂದು ಹೆಜ್ಜೆ ಮುಂದೆಯಿಟ್ಟಿದೆ. * ಮಾನವ ರೇಟೆಡ್ ಜಿಯೋಸಿಂಕ್ರೋನಸ್ ಉಪಗ್ರಹ ಉಡಾವಣಾ ವಾಹನ ಎಂಕೆ 3 (GSLV ಎಂಕೆ 3) ನ ಕೋರ್ ಎಲ್ 110 ಲಿಕ್ವಿಡ್ ಸ್ಟೇಜ್'ಗಾಗಿ ಲಿಕ್ವಿಡ್ ಪ್ರೊಪೆಲ್ಲಂಟ್ ವಿಕಾಸ್ ಎಂಜಿನ್ʼನ 3 ನೇ ದೀರ್ಘಾವಧಿಯ ಬಿಸಿ ಪರೀಕ್ಷೆ ಯಶಸ್ವಿಯಾಗಿ ಇಸ್ರೋ ನಡೆಸಿದೆ ಎಂದು ತಿಳಿಸಲಾಗಿದೆ. * ಈ ಎಂಜಿನ್'ನ್ನು 240 ಸೆಕೆಂಡುಗಳ ಕಾಲ ಪರೀಕ್ಷೆ ಮಾಡಲು ತಮಿಳುನಾಡಿನ ಮಹೇಂದ್ರಗಿರಿಯ ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್ ಎಂಜಿನ್ ಪರೀಕ್ಷಾ ಕೇಂದ್ರದಲ್ಲಿ ಹಾರಿಸಲಾಯಿತು.