Job Description: * ಹೈಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಲಯಗಳ ಕಲಾಪಗಳ ಮಾಹಿತಿ ನೀಡುವ ಟೆಲಿಗ್ರಾಮ್ ಚಾನೆಲ್'ನ್ನು ಹೈಕೋರ್ಟ್ ಆರಂಭಿಸಿದೆ, ಪ್ರಸ್ತುತ ವರ್ಚುವಲ್ ಕೇಸ್ ಇನ್ಫರ್ಮೇಷನ್ ಸರ್ವೀಸ್ ಎಂಬ ಹೆಸರಿನಲ್ಲಿ ಟೆಲಿಗ್ರಾಮ್ ಚಾಟ್ಬಾಟ್'ನ್ನು ಹೈಕೋರ್ಟ್ ಅಭಿವೃದ್ಧಿಪಡಿಸಿದೆ. * ಹೈಕೋರ್ಟ್ ಆರಂಭಿಸಿದ ಈ ಟೆಲಿಗ್ರಾಮ್ ಚಾಟ್ಬಾಟ್ ಚಾನೆಲ್'ನಲ್ಲಿ ಇ-ನ್ಯಾಯಾಲಯದ ವಿಚಾರಣೆಯ ನೈಜ ಸಮಯ, ಪ್ರಕರಣಗಳ ಪಟ್ಟಿ, ವಿಚಾರಣೆಯ ಸ್ಥಿತಿ, ದೈನಂದಿನ ಆದೇಶಗಳು ಲಭ್ಯವಿರಲಿವೆ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಅವರು ಈ ಚಾನೆಲ್'ನ ಉದ್ಘಾಟಣೆಯನ್ನು ನೆರವೇರಿಸಿದರು. * ಪ್ರಸ್ತುತ ಈ ಚಾನೆಲ್'ಗೆ ಹೈಕೋರ್ಟ್'ನ 6,500 ಸದಸ್ಯರು ಚಂದಾದಾರರಾಗಿದ್ದಾರೆ, ಹಾಗೂ 5000 ಕ್ಕೂ ಅಧಿಕ ಜಿಲ್ಲಾ ನ್ಯಾಯಾಲಯಗಳ ಸದಸ್ಯರು ಚಂದಾದಾರರಾಗಿದ್ದಾರೆ ಎಂದು ತಿಳಿದು ಬಂದಿದೆ.