Job Description: * ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಜೊತೆಗೆ ದೇಶದಲ್ಲಿನ ಆರೋಗ್ಯ ಸೇವೆಯ ಮೌಲಸೌಕರ್ಯವನ್ನು ಉತ್ತಮಗೊಳಿಸಲು, ಇದೀಗ 23,123 ಕೋಟಿ ರೂ. ಆರ್ಥಿಕ ಪ್ಯಾಕೇಜ್ ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆಯನ್ನು ನೀಡಿದೆ. * ಇತ್ತೀಚಿಗೆ ಕೇಂದ್ರ ಸರ್ಕಾರವು ನೂತನ ಕೇಂದ್ರ ಸಚಿವ ಸಂಪುಟವನ್ನು ರಚಿಸಿದೆ, ಕೇಂದ್ರದ ನೂತನ ಆರೋಗ್ಯ ಸಚಿವರಾಗಿರುವ ಮನ್ ಸುಖ್ ಮಾಂಡವಿಯಾ ಅವರು ಈ ಆರ್ಥಿಕ ಪ್ಯಾಕೇಜ್'ನ್ನು ಮುಂಬರುವ ಮಾರ್ಚ್. 2022 ರವರೆಗೆ ಕಾರ್ಯಗತಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ. * ಕೇಂದ್ರ ಸರ್ಕಾರವು ಈ ಮೊದಲು ದೇಶಾದ್ಯಂತ ಆರೋಗ್ಯ ಕೇಂದ್ರಗಳು ಮತ್ತು ಕೋವಿಡ್ ಆಸ್ಪತ್ರೆಗಳ ನಿರ್ಮಾಣಕ್ಕಾಗಿ 15 ಸಾವಿರ ಕೋಟಿ ರೂ. ನೀಡಿದೆ ಎಂದು ಆರೋಗ್ಯ ಸಚಿವರಾಗಿರುವ ಮನ್ ಸುಖ್ ಮಾಂಡವಿಯಾ ಅವರು ತಿಳಿಸಿದರು. * ಕೇಂದ್ರ ಸರ್ಕಾರದ ಈ ಪ್ಯಾಕೇಜ್'ನಲ್ಲಿ ದೇಶಾದ್ಯಂತ 736 ಜಿಲ್ಲೆಗಳಲ್ಲಿರುವ ಪ್ರಾಥಮಿಕ ಹಾಗೂ ಜಿಲ್ಲಾ ಆರೋಗ್ಯ ಕೇಂದ್ರಗಳನ್ನು ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಈ ಯೋಜನೆಯನ್ನು ಜಾರಿಗೊಳಿಸಲಿವೆ ಎಂದು ತಿಳಿಸಲಾಗಿದೆ. * ಈ ಆರ್ಥಿಕ ಪ್ಯಾಕೇಜ್'ನಿಂದ ಸರಿ ಸುಮಾರು 2.4 ಲಕ್ಷ ಸಾಮಾನ್ಯ ಬೆಡ್, 20 ಸಾವಿರ ಐಸಿಯು ಬೆಡ್ ನಿರ್ಮಾಣ ಮಾಡಲಾಗುವದು, ಇವುಗಳಲ್ಲಿ ಶೇ. 20 ರಷ್ಟು ಬೆಡ್ಗಳನ್ನೂ ಮಕ್ಕಳಿಗಾಗಿ ಮೀಸಲಿಡಲಾಗುತ್ತದೆ ಎಂದು ತಿಳಿಸಿದ್ದಾರೆ.