Job Description: * ಪ್ರಸ್ತುತ ಕೋವಿಡ್-19 ಸೋಕಿನ ಪ್ರಕರಣಗಳ ಮಧ್ಯೆ ಇದೀಗ ಕೇರಳ ರಾಜ್ಯದಲ್ಲಿ 'ಝಿಕಾ' ಎಂಬ ವೈರಸ್ ಪತ್ತೆಯಾಗಿದೆ, ಹಾಗೂ ಇದು ಕೇರಳ ರಾಜ್ಯದ ಮೊದಲ ಪ್ರಕರಣವಾಗಿದೆ. * 'ಝಿಕಾ' ವೈರಸ್ 24 ವರ್ಷದ ಗರ್ಭಿಣಿಯಲ್ಲಿ ಪತ್ತೆಯಾಗಿದೆ, ಇದು ಸೊಳ್ಳೆಯಿಂದ ಹರಡುವ ಕಾಯಿಲೆ ಇದಾಗಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಮಾಹಿತಿ ನೀಡಿದ್ದಾರೆ. * ಪ್ರಸ್ತುತ ಕೇರಳ ರಾಜ್ಯದಲ್ಲಿ ಇನ್ನೂ 13 ಶಂಕಿತ ಪ್ರಕರಣಗಳಿವೆ, ಆದರೆ ಕೇರಳ ರಾಜ್ಯವು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ದೃಢೀಕರಣಕ್ಕಾಗಿ ಕೇರಳ ಸರ್ಕಾರವು ಕಾಯುತ್ತಿದೆ. * ಈ ಝಿಕಾ ವೈರಸ್ ರೋಗಲಕ್ಷಣಗಳು ಜ್ವರ, ಚರ್ಮದ ದದ್ದುಗಳು ಮತ್ತು ಕೀಲು ನೋವು.