Job Description: * ಪ್ರಸ್ತುತ 1995 ರಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿರುವ ದೇಸಿ ತಳಿಯಾಗಿರುವ ಬಣ್ಣದ ಹತ್ತಿಯು "ಡಿಡಿಸಿಸಿ-1"ಗೆ ಇದೀಗ ವಾಣಿಜ್ಯ ಬಳಕೆಗೆ ಮುಕ್ತವಾಗಿದೆ, ಹಾಗೂ ಈ ಕೃಷಿ ವಿಶ್ವವಿದ್ಯಾಲಯ ಖಾಸಗಿ ಕಂಪನಿ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ ಬಗ್ಗೆ ಮಾಹಿತಿ ನೀಡಿದೆ. * 25 ವರ್ಷಗಳ ಹಿಂದೆ ಹೆಬ್ಬಳ್ಳಿ ಫಾರ್ಮ್ನಲ್ಲಿ ಕೃಷಿ ವಿಜ್ಞಾನಿ ಡಾ.ಬಿ.ಎಂ.ಖಾದಿ ಅವರು ಕಂದು ಬಣ್ಣದ ಹತ್ತಿ ತಳಿ ಅಭಿವೃದ್ಧಿಪಡಿಸಿದ್ದರು, ಈ ಹತ್ತಿ ತಳಿಯನ್ನು1999 ರಲ್ಲಿ ವಿಶ್ವವಿದ್ಯಾಲಯ ಬಿಡುಗಡೆಮಾಡಿತ್ತು ಆದರೆ ಈ ತಳಿ ಇಲ್ಲಿಯವರೆಗೆ ವಾಣಿಜ್ಯ ಬಳಕೆಗೆ ಮುಕ್ತವಾಗಿರಲಿಲ್ಲ ಎಂದು ತಿಳಿದು ಬಂದಿದೆ. * ಇದೀಗ ಬೆಂಗಳೂರಿನ ರಿಜಿಸ್ಟ್ರೀ ಆಫ್ ಸ್ಯಾರೀಸ್ ಸಂಸ್ಥೆಯು ಭಾರತೀಯ ಕೃಷಿ ಅನುಸಂಧಾನ ಪರಿಷತ್'ನಿಂದ ಮಾನ್ಯತೆ ಪಡೆದ ಅಗ್ರಿ ಇನ್ನೋವೇಟಿವ್ ಇಂಡಿಯಾ ಸಂಸ್ಥೆ ಜೊತೆಗೆ ಈ ಕಂದು ಬಣ್ಣದ ಹತ್ತಿ ಬೆಳೆಯಲು ಒಪ್ಪಂದ ಮಾಡಿಕೊಂಡಿದೆ. * ಈ ಕಂದು ಬಣ್ಣದ ಹತ್ತಿಯು, ಬಿಳಿ ಹತ್ತಿ ತಳಿಗಿಂತ 1.3 ಪಟ್ಟು ಅಧಿಕ ಇಳುವರಿ ಹಾಗೂ ಕೀಟ, ರೋಗ ನಿರೋಧಕ ಗುಣವನ್ನು ಹೊಂದಿದೆ ಎಂದು ಹತ್ತಿ ವಿಭಾಗದ ಹಿರಿಯ ವಿಜ್ಞಾನಿ ಡಾ. ರಾಜೇಶ್ ಎಸ್. ಪಾಟೀಲ ಅವರು ವಿವರಣೆಯನ್ನು ನೀಡಿದ್ದಾರೆ. * ದಕ್ಷಿಣ ಭಾರತದಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡುನಲ್ಲಿ ಕಪ್ಪು ಮಣ್ಣಿನ ಜಮೀನು ಮುಂಗಾರಿನಲ್ಲಿ ಈ ಕಂದು ಬಣ್ಣದ ಹತ್ತಿ ತಳಿ "ಡಿಡಿಸಿಸಿ-1" ಬೆಳೆಯಲು ಸೂಕ್ತ ಪ್ರದೇಶಗಳಾಗಿವೆ ಎಂದು ಹತ್ತಿ ವಿಜ್ಞಾನಿಗಳು ತಿಳಿಸಿದ್ದಾರೆ.