Job Description: * ಮಹಾರಾಷ್ಟ್ರ ರಾಜ್ಯದ ಶಿವಸೇನೆ ನೇತೃತ್ವದ ಸರ್ಕಾರವು ಇದೀಗ ವಿಧಾನಸಭೆಯಲ್ಲಿ ಕೃಷಿ, ಸಹಕಾರ, ಆಹಾರ ಮತ್ತು ನಾಗರಿಕ ಸರಬರಾಜಿಗೆ ಸಂಬಂಧಿಸಿದ 3 ತಿದ್ದುಪಡಿ ಮಸೂದೆಗಳನ್ನು ಪರಿಚಯಿಸಿದೆ. * ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ಕೃಷಿ ಕಾನೂನುಗಳಿಗೆ ಪ್ರತಿಯಾಗಿ ಈ ಕೃಷಿ ಮಸೂದೆಗಳನ್ನು ಜಾರಿಗೆ ತರಲು ಮಹಾರಾಷ್ಟ್ರ ಸರಕಾರವು ಉದ್ದೇಶಿಸಿದೆ. * ಕೃಷಿ ಒಪ್ಪಂದವು ಸರಿಯಾದ ಸಮಯದಲ್ಲಿ ಬಾಕಿ ಪಾವತಿ, ರೈತರಿಗೆ ಕಿರುಕುಳ ನೀಡಿದರೆ ಮೂರು ವರ್ಷಗಳ ಜೈಲು ಶಿಕ್ಷೆ, ಹಾಗೂ 5 ಲಕ್ಷ ರೂ. ದಂಡ ವಿಧಿಸಲಾಗುವದು ಎಂದು ತಿಳಿಸಿದ್ದಾರೆ. * ಕೃಷಿ ಉತ್ಪನ್ನಗಳ ಉತ್ಪಾದನೆ, ಪೂರೈಕೆ, ವಿತರಣೆಯನ್ನು ನಿಯಂತ್ರಿಸಲು ಹಾಗೂ ನಿಷೇಧಿಸಲು ಇದರ ಜೊತೆಗೆ ಅಗತ್ಯ ವಸ್ತುಗಳ ಮೇಲೆ ಸ್ಟಾಕ್ ಮಿತಿಗಳನ್ನು ಹೇರಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುವ ನಿಬಂಧನೆಗಳು ಕೂಡ ಈ ಮಸೂದೆಗಳಲ್ಲಿ ಇರಲಿವೆ ಎಂದು ಮಹಾ ಸರ್ಕಾರ ತಿಳಿಸಿದೆ. * ಮಹಾರಾಷ್ಟ್ರ ರಾಜ್ಯ ಸರ್ಕಾರದ ತಿದ್ದುಪಡಿ ಮಸೂದೆಗಳು:- - ಅಗತ್ಯ ಸರಕುಗಳು. - ರೈತರ ಸಬಲೀಕರಣ ಮತ್ತು ರಕ್ಷಣೆ ಮಸೂದೆ. - ಬೆಲೆ ಖಾತರಿ. * ಮಹಾರಾಷ್ಟ್ರ ರಾಜ್ಯ ಸರ್ಕಾರವು 2 ತಿಂಗಳ ಕಾಲ ಸಾರ್ವಜನಿಕವಾಗಿ ಈ ಕೃಷಿ ಮಸೂದೆಗಳ ಬಗ್ಗೆ ಏನಾದರು ಸಲಹೆಗಳು ಹಾಗೂ ಆಕ್ಷೇಪಣೆಗಳಿದ್ದರೆ ಚರ್ಚೆಗೆ ಅವಕಾಶ ನೀಡಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.