Job Description: * ದೇಶದ ಮೊದಲ ಸೆಗಣಿ ಪೇಂಟ್ ಘಟಕ ಜೈಪುರದಲ್ಲಿ ಆರಂಭ, ಪ್ರಸ್ತುತ ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾಗಿರುವ ನಿತಿನ್ ಗಡ್ಕರಿ ಅವರು ಈ ಸೆಗಣಿ ಪೇಂಟ್'ಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ, ಈ ಮಾಹಿತಿಯನ್ನು ತಾವೇ ಹೇಳಿಕೊಂಡಿದ್ದಾರೆ. * ಸೆಗಣಿಯಿಂದ ತಯಾರಿಸಲಾಗುವ ದೇಶದ ಏಕೈಕ ಹಾಗೂ ಮೊದಲ ಪೇಂಟ್ ತಯಾರಿಕ ಘಟಕವನ್ನು ಕೇಂದ್ರ ಸರಕಾರಿ ಸ್ವಾಮ್ಯದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಅಡಿಯಲ್ಲಿ ರಾಜಸ್ಥಾನ ರಾಜ್ಯದ ರಾಜಧಾನಿಯಾಗಿರುವ ಜೈಪುರದಲ್ಲಿ ಉದ್ಘಾಟಿಸಿದರು. * ಸೆಗಣಿಯಿಂದ ತಯಾರಿಸಲಾಗುವತ್ತಿರುವ ಈ ಹೊಸ ಪೇಂಟ್ ಬ್ಯಾಕ್ಟೀರಿಯಾ ಪ್ರತಿಬಂಧಕ ಗುಣವನ್ನು ಹೊಂದಿದೆ, ಹಾಗೂ ಪರಿಸರ ಸ್ನೇಹಿ, ವಿಷಕಾರಿಯಲ್ಲ, ವಾಸನೆ ರಹಿತ, ಕಡಿಮೆ ವೆಚ್ಚದಲ್ಲಿ ಲಭ್ಯವಾಗುವ ಪೇಂಟ್ ಇದಾಗಿದೆ ಎಂದು ತಿಳಿಸಿದ್ದಾರೆ.