Job Description: * ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 8 ರಾಜ್ಯಗಳಿಗೆ ನೂತನ ರಾಜ್ಯಪಾಲರುನ್ನು ನೇಮಕ ಮಾಡಿದ್ದಾರೆ, ಈ ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಿದೆ. * ಎಂಟು ರಾಜ್ಯಗಳ ನೂತನ ರಾಜ್ಯಪಾಲರು:- - ಕರ್ನಾಟಕ- ಥಾವರ್ ಚಂದ್ ಗೆಹ್ಲೋಟ್ - ಗೋವಾ- ಪಿ.ಎಸ್. ಶ್ರೀಧರನ್ ಪಿಳ್ಳೈ - ತ್ರಿಪುರ- ಸತ್ಯದೇವ್ ನಾರಾಯಣ್ ಆರ್ಯ - ಜಾರ್ಖಂಡ್- ರಮೇಶ್ ಬೈಸ್ - ಹರಿಯಾಣ- ಬಂಡಾರು ದತ್ತಾತ್ರೇಯ - ಮಿಜೋರಾಂ- ಹರಿಬಾಬು ಕಂಭಂಪತಿ - ಮಧ್ಯಪ್ರದೇಶ- ಮಂಗುಭಾಯ್ ಚಗನ್ಭಾಯ್ ಪಟೇಲ್ - ಹಿಮಾಚಲ ಪ್ರದೇಶ- ರಾಜೇಂದ್ರನ್ ವಿಶ್ವನಾಥ್ ಅರ್ಲೆಕರ್ * ಕರ್ನಾಟಕ ರಾಜ್ಯದ ಹೊಸ ರಾಜ್ಯಪಾಲರ ಮಾಹಿತಿ: ಥಾವರ್ ಚಂದ್ ಗೆಹ್ಲೋಟ್ ಅವರು 1948 ರ ಮೇ 18 ರಂದು ಮಧ್ಯಪ್ರದೇಶ ರಾಜ್ಯದ ರುಪೆಟಾ ಎಂಬ ಗ್ರಾಮದಲ್ಲಿ ಜನಿಸಿದರು, ಇವರು 3 ಬಾರಿ ಮಧ್ಯಪ್ರದೇಶ ವಿಧಾನಸಭೆಯ ಸದಸ್ಯರಾಗಿ, ಹಾಗೂ 4 ಬಾರಿ ಶಾಜಾಪುರ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ, ಮತ್ತೇ 2012 ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. * ಥಾವರ್ ಚಂದ್ ಗೆಹ್ಲೋಟ್ ಅವರು ಬಿಜೆಪಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಎಸ್.ಸಿ ಮೋರ್ಚಾ ಅಧ್ಯಕ್ಷ ಸ್ಥಾನ ಹೀಗೆ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.