Job Description: * ಬ್ರಿಟನ್ನ ಸೇನಾ ಮುಖ್ಯಸ್ಥ ಜನರಲ್ ಸರ್ ನಿಕೋಲಸ್ ಕಾರ್ಟರ್ ಅವರನ್ನು ಭಾರತೀಯ ಸೇನೆಯ ಮುಖ್ಯಸ್ಥರಾಗಿರುವ ಜನರಲ್ ಎಂ.ಎಂ.ನರವಣೆ ಅವರು ಭೇಟಿಯಾಗಿದ್ದಾರೆ, ಆ ಸಂಧರ್ಭದಲ್ಲಿ ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರದ ವಿಷಯದ ಬಗ್ಗೆ ಮಾತುಕತೆಯನ್ನು ನಡೆಸಿದ್ದಾರೆ ಎಂದು ಭಾರತೀಯ ಸೇನೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ. * ಭಾರತೀಯ ಹೈಕಮಿಷನ್ ಜನರಲ್ ನರವಣೆ ಅವರು ಜುಲೈ 5 ರಂದು ಬ್ರಿಟನ್ಗೆ ಬಂದಿದ್ದಾರೆ ಎಂದು ತಿಳಿಸಿದೆ. * ಭಾರತೀಯ ಸೇನೆಯ ಮುಖ್ಯಸ್ಥರಾಗಿರುವ ಜನರಲ್ ಎಂ.ಎಂ.ನರವಣೆ ಅವರು ಯುರೋಪ್ ಪ್ರವಾಸದ ಸಂಧರ್ಭದಲ್ಲಿ ಬ್ರಿಟನ್ನಲ್ಲಿ ಎರಡು ದಿನಗಳ ಪ್ರವಾಸವನ್ನು ಹಮ್ಮಿಕೊಂಡಿದ್ದರು, ಇದೇ ಸಂಧರ್ಭದಲ್ಲಿ ಬ್ರಿಟನ್ನ ರಕ್ಷಣಾ ಕಾರ್ಯದರ್ಶಿ ಬೆನ್ ವಾಲ್ಸೆ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ ಎಂದು ಭಾರತೀಯ ಹೈಕಮಿಷನ್ ತಿಳಿಸಿದೆ.