Job Description: * ಭಾರತ ಸರ್ಕಾರವು ಭಾರತದಲ್ಲಿನ ಗ್ರಾಹಕರ ಹಿತಾಸಕ್ತಿ ಕಾಪಾಡಲು ಆಮ್ವೇ ಮತ್ತು ಟಪ್ಪರ್ವೇರ್ನಂತಹ ನೇರ ಮಾರಾಟ ಸಂಸ್ಥೆಗಳನ್ನು ನಿಯಂತ್ರಿಸುವ ಕರಡು ಮಾನದಂಡವನ್ನು ಸೂಚಿಸಿದೆ. * ಪ್ರಸ್ತುತ ನೇರ ಮಾರಾಟ ಸಂಸ್ಥೆಗಳಿಗೆ ಪಿರಮಿಡ್ ಹಾಗೂ ಹಣ ಚಲಾವಣೆಯಲ್ಲಿರುವ ಯೋಜನೆಗಳಿಗೆ ಮಾನದಂಡಗಳ ಪ್ರಕಾರ ಅನುಮತಿ ನೀಡಲಾಗುವದಿಲ್ಲ ಎಂದು ಭಾರತ ಸರ್ಕಾರ ತಿಳಿಸಿದೆ. * 2021 ರಲ್ಲಿ ಗ್ರಾಹಕ ಸಂರಕ್ಷಣೆ (ನೇರ ಮಾರಾಟ) ನಿಯಮಗಳನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಆರಂಭಿಸಿದೆ. * ಈ ಹಿಂದೇ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ನೇರ ಮಾರಾಟ ಕಂಪನಿಗಳಿಗೆ 2016 ರಲ್ಲಿ ಮಾರ್ಗಸೂಚಿಗಳನ್ನು ನಿಗದಿಪಡಿಸಿತ್ತು. * ಈ ಹೊಸ ಕರಡು ನಿಯಮಗಳು ಉಲ್ಲಂಘನೆಗಳಿಗೆ ದಂಡವನ್ನು ಪ್ರಸ್ತಾಪಿಸುತ್ತವೆ, ಹಾಗೂ ನೇರ ಮಾರಾಟ ಮಾಡುವ ಕಂಪನಿಗಳಿಗೆ ಪಿರಮಿಡ್ ಯೋಜನೆ ಮತ್ತು ಹಣ ಚಲಾವಣೆಯಲ್ಲಿರುವ ಯೋಜನೆಯನ್ನು ನಿಷೇಧಿಸಿದೆ. * ಪ್ರಸ್ತುತ ಇನ್ನು ಮುಂದೆ ನೇರ ಮಾರಾಟಗಾರರನ್ನು ನಿಯಂತ್ರಿಸಲು ಈ ಕರಡು ನಿಯಮವು ಗುರುತಿನ ಚೀಟಿ ಹಾಗೂ ಅನುಮೋದನೆಯಿಲ್ಲದೆ ಮಾರಾಟಗಾರರು ಗ್ರಾಹಕರ ಆವರಣಕ್ಕೆ ಭೇಟಿ ನೀಡುವದನ್ನು ನಿಷೇಧಿಸಲಾಗಿದೆ.