Job Description: * ವಂಚನೆ ಸಂದೇಶಗಳಿಗೆ 10,000 ರೂ. ದಂಡ ವಿಧಿಸಲು ಟೆಲಿಕಾಂ ಇಲಾಖೆ ಪ್ರಸ್ತಾಪಿಸಿದೆ. * ಪ್ರಸ್ತುತ ಟೆಲಿಮಾರ್ಕೆಟರ್ಗಳು 50 ಉಲ್ಲಂಘನೆಗಳ ಮಾಡಿದ ತದನಂತರದ ಪ್ರತಿ ಕರೆ ಹಾಗೂ ಎಸ್ಎಂಎಸ್ಗೆ(SMS) ಟೆಲಿಕಾಂ ಇಲಾಖೆಯು 10,000 ರೂ. ದಂಡ ವಿಧಿಸುವದಾಗಿ ಪ್ರಸ್ತಾವನೆಯನ್ನು ನೀಡಿದೆ. * ಪ್ರಸ್ತುತ ಟೆಲಿಮಾರ್ಕೆಟರ್ಗಳು 0-10 ಉಲ್ಲಂಘನೆಗಳಿಗೆ 1,000 ರೂ. ಮತ್ತು10-50 ಉಲ್ಲಂಘನೆಗಳಿಗೆ ತಲಾ 5,000 ರೂ ಇದರ ಜೊತೆಗೆ 50 ಕ್ಕೂ ಹೆಚ್ಚು ಉಲ್ಲಂಘನೆಗಳಿಗೆ ತಲಾ 10,000 ರೂ. ದಂಡ ವಿಧಿಸಲು ಟೆಲಿಕಾಂ ಇಲಾಖೆ ತೀರ್ಮಾನಿಸಿದೆ. * 2018 ರ ಟೆಲಿಕಾಂ ಕಮರ್ಷಿಯಲ್ ಕಮ್ಯುನಿಕೇಷನ್ಸ್ ಗ್ರಾಹಕ ಆದ್ಯತೆ ನಿಯಮಗಳ ಅಡಿಯಲ್ಲಿ ಸ್ಲ್ಯಾಬ್ಗಳು 0-100, 100-1,000 ಮತ್ತು 1,000 ಕ್ಕೂ ಅಧಿಕ ಉಲ್ಲಂಘನೆಗಳಾಗಿವೆ. * ಡಿಜಿಟಲ್ ಇಂಟೆಲಿಜೆನ್ಸ್ ಯುನಿಟ್ ಸಾಧನ ಮಟ್ಟದಲ್ಲಿ ಉಲ್ಲಂಘನೆಗಳನ್ನು ಪರಿಶೀಲಿಸಲು ಸಿಸ್ಟಮ್ ರಚಿತ ಸಂದೇಶವನ್ನು ಶಂಕಿತ ಸಂಖ್ಯೆಗಳಿಗೆ ಕಳುಹಿಸುತ್ತದೆ, ಒಂದು ವೇಳೆ ಮರು ಪರಿಶೀಲನೆ ಮಾಡದೆ ಇದ್ದ ಸಂಧರ್ಭದಲ್ಲಿ ಎಲ್ಲಾ ಸಂಖ್ಯೆಗಳನ್ನು ಸಂಪರ್ಕ ಕಡಿತಗೊಳಿಸಲಾಗುತ್ತದೆ ಹಾಗೂ ಶಂಕಿತ ಪಟ್ಟಿಗೆ ಸೇರಿಸಲಾಗುತ್ತದೆ, ಇದಾದ ನಂತರ ಶಂಕಿತ ಪಟ್ಟಿಯಲ್ಲಿರುವ ಐಎಂಇಐಗಳಿಗೆ 30 ದಿನಗಳ ಅವಧಿಗೆ ಯಾವುದೇ ಕರೆಗಳು, ಎಸ್ಎಂಎಸ್'ಗಳಿಗೆ ಅನುಮತಿಯನ್ನು ನೀಡಲಾಗುವದಿಲ್ಲ. * ದೂರಸಂಪರ್ಕ ಇಲಾಖೆ ಒಂದು ಭಾರತ ಸರ್ಕಾರದ ಕಾರ್ಯನಿರ್ವಾಹಕ ಶಾಖೆಯ ಸಂವಹನ ಸಚಿವಾಲಯದ ಒಂದು ವಿಭಾಗವಾಗಿದೆ, ಹಾಗೂ ದೂರಸಂಪರ್ಕ ಸೇವೆಗಳ ಬೆಳವಣಿಗೆಯನ್ನು ವೇಗಗೊಳಿಸಲು ಟೆಲಿಕಾಂ ಇಲಾಖೆ ಅಭಿವೃದ್ಧಿ ನೀತಿಗಳನ್ನು ರೂಪಿಸುತ್ತಿದೆ.