Job Description: * ರಾಜ್ಯದ ಮೊದಲ ಪ್ರಜೆ * 153 ನೇ ವಿಧಿ : "ರಾಜ್ಯಗಳಿಗೆ ರಾಜ್ಯಪಾಲರ ಹುದ್ದೆ ಅವಕಾಶ ಕಲ್ಪಿಸಿದೆ," * 154 ನೇ ವಿಧಿ : "ರಾಜ್ಯಪಾಲರ ಕಾರ್ಯಂಗಾಧಿಕಾರ" * 155 ವಿಧಿ : "ರಾಜ್ಯಪಾಲರು ರಾಷ್ಟ್ರಪತಿಗಳಿಂದ ನೇಮಕ" * 156 ನೇ ವಿಧಿ : "ಅಧಿಕಾರ ಅವಧಿ *ಐದು* ವರ್ಷಗಳು. ಕೆಲವೊಮ್ಮೆ ಉತ್ತರಾಧಿಕಾರಿ ಬರುವರೆಗೂ ಅಧಿಕಾರವಧಿ ವಿಸ್ತರಿಸಬಹುದು", ( ರಾಷ್ಟ್ರಪತಿಗಳ ಇಚ್ಛೆ ಇರುವರಿಗೂ ಅಧಿಕಾರದಲ್ಲಿ ಇರುತ್ತಾರೆ) * 157 ನೇ ವಿಧಿ : ರಾಜ್ಯಪಾಲರಾಗಲು ಅರ್ಹತೆಗಳು . * 158ನೇ ವಿಧಿ : "ರಾಜ್ಯಪಾಲರ ವೇತನ ಮತ್ತು ಸವಲತ್ತು". ( ರಾಜ್ಯಪಾಲರ ಅಧಿಕೃತ ನಿವಾಸ= ರಾಜ್ಯಭವನ) * 159 ನೇ ವಿಧಿ : "ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ಪ್ರಮಾಣವಚನ ಬೋಧಿಸುತ್ತಾರೆ." * 160 ನೇ ವಿಧಿ : ರಾಜ್ಯಪಾಲರ ಹುದ್ದೆ ಖಾಲಿಯಾದಾಗ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ಹಂಗಾಮಿ ರಾಜ್ಯಪಾಲರಾಗಿ ರಾಷ್ಟ್ರಪತಿಗಳ ಆದೇಶದ ಮೇರೆಗೆ ಕಾರ್ಯನಿರ್ವಹಿಸುತ್ತಾರೆ, * 161 ನೇ ವಿಧಿ : "ಪ್ರಕರಣಗಳಿಗೆ ಕ್ಷಮಾದಾನ ನೀಡುವ ಅಧಿಕಾರ" * 162 ನೇ ವಿಧಿ : "ರಾಜ್ಯಪಾಲರ ಅಧಿಕಾರಗಳು" * 174 ನೇ ವಿಧಿ : "ಶಾಸಕಾಂಗದ ಅಧಿವೇಶನವನ್ನು ಕರೆಯುವ ಮತ್ತು ಮುಂದೊಡುವ ಅಧಿಕಾರವನ್ನು ಹೊಂದಿರುತ್ತಾರೆ", * 175 ನೇ ವಿಧಿ : "ರಾಜ್ಯಪಾಲರು ಶಾಸಕಾಂಗದಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವ ಅಧಿಕಾರ ಹೊಂದಿರುತ್ತಾರೆ", * 192 ನೇ ವಿಧಿ : "ರಾಜ್ಯಪಾಲರು ರಾಜ್ಯ ಶಾಸಕರ ಅನರ್ಹತೆ ಬಗ್ಗೆ ಚುನಾವಣಾ ಆಯೋಗದ ಸಲಹೆಯಂತೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಹೊಂದಿರುತ್ತಾರೆ", * ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಕ ಮಾಡುವ ಅಧಿಕಾರ ಹೊಂದಿರುತ್ತಾರೆ, ಮತ್ತು ಎಲ್ಲಾ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾಗೀರುತಾರೆ * 200 ನೇ ವಿಧಿ : " ವಿಧಾನಮಂಡಲ ಪಾಸ್ ಮಾಡಿ ಅಂಗೀಕರಿಸಿದ ಸಹೀಗೆ ಕಳುಹಿಸಿದ ಮಸೂದೆಗಳನ್ನು ರಾಷ್ಟ್ರಪತಿಗಳಿಗೆ ಕಳಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ. * 213 ನೇ ವಿಧಿ : "ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರ" * ರಾಜ್ಯ ವಿಧಾನಸಭೆಗೆ 333 ನೇ ವಿಧಿ : ಒಬ್ಬ ಆಂಗ್ಲೋ ಇಂಡಿಯನ್ನರನ್ನು ಮತ್ತು 171 ನೇ ವಿಧಿ ರಾಜ್ಯ ವಿಧಾನಪರಿಷತ್ತಿಗೆ 1/6 ರಷ್ಟು ಸ್ಥಾನಗಳನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ನಾಮಕರಣ ಮಾಡುತ್ತಾರೆ, ✍️ ರಾಜ್ಯಪಾಲ ವಿಶೇಷ ಅಂಶಗಳು * ರಾಜ್ಯದ ಮುಖ್ಯಸ್ಥ : ರಾಜ್ಯಪಾಲರು * ರಾಜ್ಯದ ಪ್ರಥಮ ಪ್ರಜೆ : ರಾಜ್ಯಪಾಲರು * ರಾಜ್ಯದ ಸಂವಿಧಾನಿಕ ಮುಖ್ಯಸ್ಥ : ರಾಜ್ಯಪಾಲರು * ರಾಜ್ಯದ ಪ್ರಥಮ ರಾಜ್ಯಪಾಲ : ಜಯಚಾಮರಾಜ ಒಡೆಯರ್ * ಭಾರತದ ಮೊದಲ ಮಹಿಳಾ ರಾಜ್ಯಪಾಲರು : ಸರೋಜಿನಿ ನಾಯ್ಡು * ಕರ್ನಾಟಕದ ಮೊದಲ ಪ್ರಥಮ ಮಹಿಳ ರಾಜ್ಯಪಾಲರು : ವಿ ಎಸ್ ರಮಾದೇವಿ * ಕರ್ನಾಟಕ ರಾಜ್ಯದ ದೀರ್ಘಾವಧಿ ರಾಜ್ಯಪಾಲ : ಖುರ್ಷಿದ್ ಅಲಾಮ್ ಖಾನ್ * ಪರಸ್ತುತ ರಾಜ್ಯದ ರಾಜ್ಯಪಾಲ : 19 ನೇ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ * ನಿರ್ಗಮಿತ ರಾಜ್ಯಪಾಲ : ವಾಜುಬಾಯಿ ವಾಲಾ