Job Description: * ಈ ಹಿಂದೆ ಉತ್ತರಪ್ರದೇಶ ರಾಜ್ಯದಲ್ಲಿ ಸಮಾಜವಾದಿ ಪಕ್ಷದ ಸರ್ಕಾರವು ಆಡಳಿತದಲ್ಲಿ ಇರುವ ಸಂಧರ್ಭದಲ್ಲಿ ಲಖನೌ'ನ ಗೋಮತಿ ನದಿ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಸಿಬಿಐ ಹೊಸ ಪ್ರಕರಣಗಳನ್ನೂ ದಾಖಲಿಸಿದೆ. * ಈ ಗೋಮತಿ ನದಿ ಯೋಜನೆಗೆ ಸಂಬಂಧಿಸಿ ದಾಖಲಾಗಿರುವ ಎಫ್ಐಆರ್(FIR) ಆಧರಿಸಿ ರಾಜ್ಯದ 43 ಸ್ಥಳಗಳಲ್ಲಿ ಸಿಬಿಐ(CBI) ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. * ಉತ್ತರ ಪ್ರದೇಶ ರಾಜ್ಯ ಸರ್ಕಾರವು ಈ ಗೋಮತಿ ನದಿ ಯೋಜನೆಗೆ ಸಂಬಂಧಿಸಿದ ಎಂಜಿನಿಯರ್ಗಳು ಹಾಗೂ 180 ಅಧಿಕಾರಿಗಳ ಹೆಸರುಗಳು ಎಫ್ಐಆರ್(FIR)ನಲ್ಲಿ ದಾಖಲಿಸಿದೆ, ಇದು ಈ ಯೋಜನೆಗೆ ಸಂಬಂಧಿಸಿದ 2 ನೇ ಎಫ್ಐಆರ್(FIR) ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.