Job Description: * 2021 ರ ಜುಲೈ. 5 ರಂದು ಡಿಜಿಟಲ್ ಪಾವತಿಗಳು ಮತ್ತು ಹಣಕಾಸು ಸೇವೆಗಳ ವೇದಿಕೆಯಾಗಿರುವ Paytm' ಬಳಕೆಯ ಗ್ರಾಹಕರಿಗೆ 'ಪೋಸ್ಟ್ಪೇಯ್ಡ್ ಮಿನಿ' ಸೇವೆಯನ್ನು ಆರಂಭಿಸಿದೆ. * ಭಾರತದ 550 ನಗರಗಳಲ್ಲಿ ಈ Paytm ಪೋಸ್ಟ್ಪೇಯ್ಡ್ ಸೇವೆ ಲಭ್ಯವಿದೆ. * ಈ ಪೋಸ್ಟ್ ಪೇಯ್ಡ್ ಮಿನಿ ಸೇವೆಯನ್ನು ಆದಿತ್ಯ ಬಿರ್ಲಾ ಫೈನಾನ್ಸ್ ಲಿಮಿಟೆಡ್ ಸಹಯೋಗದೊಂದಿಗೆ ಆರಂಭಿಸಲಾಗಿದೆ, ಹಾಗೂ ಇದು ಒಂದು ಸಣ್ಣ ಟಿಕೆಟ್ ತ್ವರಿತ ಸಾಲ ಸೌಲಭ್ಯವಾಗಿದೆ, ಇದರಿಂದ ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಬಳಕೆದಾರರಿಗೆ ಮನೆಯ ಖರ್ಚುಗಳನ್ನು ನಿಭಾಯಿಸಲು ಸಹಾಯಕಾರಿಯಾಗಲಿದೆ ಎಂದು ತಿಳಿಸಲಾಗಿದೆ. * Paytm ಪೋಸ್ಟ್ಪೇಯ್ಡ್'ನ ಶೂನ್ಯ(ಜೀರೋ) ಶೇಕಡಾ ಬಡ್ಡಿ ಸಾಲವನ್ನು ಮರು ಪಾವತಿ ಮಾಡಲು 30 ದಿನಗಳವರೆಗೆ ಕಾಲಾವಕಾಶವನ್ನು ನೀಡಲಿದೆ, ಹಾಗೂ ಯಾವುದೇ ವಾರ್ಷಿಕ ಶುಲ್ಕ ಇರುವುದಿಲ್ಲ, ಆದರೆ ಕನಿಷ್ಠ ಅನುಕೂಲ ಶುಲ್ಕವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಪೆಟಿಎಂ ತಿಳಿಸಿದೆ. * ಪ್ರಸ್ತುತ ಈ ಪೋಸ್ಟ್ಪೇಯ್ಡ್ ಮಿನಿ ವ್ಯವಸ್ಥೆಯ ಸಹಾಯದಿಂದ 250 ರಿಂದ 1000 ರೂ.ವರೆಗಿನ ಸಾಲಗಳಿಗೆ ಪೇಟಿಎಂ ಪ್ರವೇಶವನ್ನು ನೀಡಲಿದೆ, ಹಾಗೂ ಪೋಸ್ಟ್ಪೇಯ್ಡ್ ಮಿನಿ ಸೇವೆಯು 60,000 ರೂ.ಗಳವರೆಗೆ ಸಾಲವನ್ನು ಬಳಕೆದಾರರಿಗೆ ನೀಡಲಿದೆ ಎಂದು ತಿಳಿಸಿದೆ. * ಈ Paytm ಪೋಸ್ಟ್ಪೇಯ್ಡ್ ಸೇವೆಯನ್ನು ಭಾರತ ದೇಶಾದ್ಯಂತ ಆನ್ಲೈನ್ ಮತ್ತು ಆಫ್ಲೈನ್ ವ್ಯಾಪಾರಿ ಅಂಗಡಿಗಳಲ್ಲಿ ಪಾವತಿ ಮಾಡಲು ಅವಕಾಶ ನೀಡಲಾಗುತ್ತದೆ, ಹಾಗೂ ಪೆಟ್ರೋಲ್ ಪಂಪ್, ಸುತ್ತ ಮುತ್ತಲಿನ ಕಿರಾಣಿ, ಔಷಧಿ ಅಂಗಡಿಗಳಲ್ಲಿ ಬಳಕೆದಾರರಿಂದ ಸ್ವೀಕರಿಸಲಾಗುತ್ತದೆ ಎಂದು ಪೆಟಿಎಂ ತಿಳಿಸಿದೆ.