Job Description: * ಚೀನಾ ದೇಶದ ಗಗನಯಾತ್ರಿಗಳು ಹೊಸ ಕಕ್ಷೀಯ ಕೇಂದ್ರದ ಹೊರಗೆ ಮೊದಲ ಸ್ಪೇಸ್ ವಾಕ್ ನಡೆಸಿದ್ದಾರೆ, ಸುಮಾರು 15 ಮೀ. ಉದ್ದದ ರೊಬೋಟಿಕ್ ಆರ್ಮ್'ನ್ನು ಹೊಸ ಕಕ್ಷೀಯ ಕೇಂದ್ರದಲ್ಲಿ ಸ್ಥಾಪನೆ ಮಾಡಿದ್ದಾರೆ. * ಲಿಯು ಬೊಮಿಂಗ್ ಮತ್ತು ಟ್ಯಾಂಗ್ ಹಾಂಗ್ಬೋ ಈ ಚೀನಾ ಗಗನ ಯಾತ್ರಿಗಳು ಹೊಸ ಕಕ್ಷೀಯ ಕೇಂದ್ರದ ಹೊರಗಡೆ ಇದ್ದರು ಮತ್ತೊಬ್ಬ ಸದಸ್ಯ ಕಮಾಂಡರ್ ನೀ ಹೈಶೆಂಗ್ ಕೇಂದ್ರದ ಒಳಭಾಗದಲ್ಲಿ ಕೇಂದ್ರದ ಕಾರ್ಯವನ್ನು ನಿರ್ವಹಣೆ ಮಾಡುತಿದ್ದರು. * ಈ ಹಿಂದೇ ಮೇ ತಿಂಗಳಲ್ಲಿ ಮಂಗಳನ ಮೇಲೆ ರೋಬೋಟ್ ರೋವರ್ ಲ್ಯಾಂಡ್ ಆದ ಮಹತ್ವದ ಯೋಜನೆಯ ನಂತರ ಚೀನಾದ ಗಗನಯಾತ್ರಿಗಳು 3 ತಿಂಗಳ ಮಿಷನ್'ನ್ನು ಕೈಗೊಂಡಿದ್ದಾರೆ ಇದು ಕೂಡ ಬಾಹ್ಯಾಕಾಶ ಭಾಗವಾಗಿದೆ ಎಂದು ತಿಳಿಸಿದ್ದಾರೆ. * ಚೀನಾ ದೇಶದ ಆಡಳಿತ ಪಕ್ಷವಾಗಿರುವ ಕಮ್ಯುನಿಸ್ಟ್ ಪಕ್ಷದ ಸ್ಥಾಪನೆಯ 100 ನೇ ವಾರ್ಷಿಕೋತ್ಸವದ ಭಾಗವಾಗಿ ಈ ಮಿಷನ್'ನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.