Job Description: * ಪ್ರತಿವರ್ಷ ಜುಲೈ. 1 ರಂದು ಭಾರತೀಯ ವೈದ್ಯಕೀಯ ಸಂಘವು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಣೆ ಮಾಡುತ್ತದೆ, ಪ್ರಸ್ತುತ ಜನನ ಹಾಗೂ ಮರಣ ವಾರ್ಷಿಕೋತ್ಸವವನ್ನು ಗೌರವಿಸಲು ಈ ದಿನ ಆಚರಣೆ ಮಾಡಲಾಗುತ್ತದೆ. * ಪ್ರಸ್ತುತ ಡಾ. ಬಿಧಾನ್ ಚಂದ್ರ ರಾಯ್ ಅವರು ಮಹಾನ್ ವೈದ್ಯ ಹಾಗೂ ಪಶ್ಚಿಮ ಬಂಗಾಳದ 2ನೇ ಮುಖ್ಯಮಂತ್ರಿ ಇವರು 1882 ರ ಜುಲೈ. 1 ರಂದು ಜನಿಸಿದರು ಹಾಗೂ 1962 ರ ಜುಲೈ. 1 ರಂದು ನಿಧನರಾದರು. * ಭಾರತದಲ್ಲಿ ಮೊದಲ ವೈದ್ಯರ ದಿನ ಡಾ.ಬಿಧನ್ ಚಂದ್ರ ರಾಯ್ ಅವರಿಗೆ ಗೌರವ ನೀಡಲು 1991 ರಲ್ಲಿ ಭಾರತದಲ್ಲಿ ಮೊದಲ ಬಾರಿ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಣೆ ಮಾಡಲಾಗಿದೆ. * ಪ್ರಸ್ತುತ ಭಾರತ ಸೇರಿ ವೈದ್ಯರ ದಿನವನ್ನು ಬೇರೆ ಬೇರೆ ದೇಶಗಳಲ್ಲಿ ಆಚರಣೆ ಮಾಡುತ್ತಾರೆ, ಯುನೈಟೆಡ್ ಸ್ಟೇಟ್ಸ್ನಲ್ಲಿ ಮಾರ್ಚ್. 30ರಂದು ವೈದ್ಯರ ದಿನವನ್ನು ಆಚರಿಸುತ್ತಾರೆ, ಕ್ಯೂಬಾದಲ್ಲಿ ಡಿಸೆಂಬರ್. 3 ರಂದು ಆಚರಿಸುತ್ತಾರೆ, ಹಾಗೂ ಇರಾನ್'ನಲ್ಲಿ ಆಗಸ್ಟ್. 23 ರಂದು ಆಚರಿಸುತ್ತಾರೆ.