Job Description: * 2020 ರ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿಯನ್ನು ಒಡಿಯಾ ಕವಿ ಡಾ.ರಾಜೇಂದ್ರ ಕಿಶೋರ್ ಪಾಂಡ ಅವರಿಗೆ ಲಭಿಸಿದೆ. * ಈ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿಯನ್ನು ಪ್ರೊ.ಹಂಪಾ ನಾಗರಾಜಯ್ಯ ಅವರ ನೇತೃತ್ವದ 3ಸದಸ್ಯರ ಸಮಿತಿಯಿಂದ ಡಾ.ಪಾಂಡ ಅವರ ಹೆಸರನ್ನು ಅಂತಿಮಗೊಳಿಸಲಾಯಿತು. * ದಿವಂಗತ ರಾಷ್ಟ್ರ ಕವಿ ಕುವೆಂಪು ಅವರ ಸವಿ ನೆನಪಿಗಾಗಿ ಈ ಕುವೆಂಪು ರಾಷ್ಟ್ರೀಯ ಪುರಸ್ಕಾರವನ್ನು 2013 ರಲ್ಲಿ ರಾಷ್ಟ್ರಕವಿ ಕುವೆಂಪು ಟ್ರಸ್ಟ್ ಈ ಪ್ರಶಸ್ತಿಯನ್ನು ಸ್ಥಾಪಿಸಿದೆ, ಈ ಪ್ರಶಸ್ತಿಯು 5 ಲಕ್ಷ ರೂ.ಗಳ ನಗದು ಹಾಗೂ ಬೆಳ್ಳಿ ಪದಕ ಮತ್ತು ಪ್ರಮಾಣ ಪತ್ತ್ರವನ್ನು ಒಳಗೊಂಡಿರುತ್ತದೆ. * ಈ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿಯನ್ನು ಮಲಯಾಳಂ, ಉರ್ದು, ಹಿಂದಿ, ಮರಾಠಿ, ಪಂಜಾಬಿ ಹಾಗೂ ಕನ್ನಡದ ಬರಹಗಾರರಿಗೆ ನೀಡಲಾಗಿದೆ. * 1944 ರ ಜೂನ್. 24 ರಂದು ಡಾ ರಾಜೇಂದ್ರ ಕಿಶೋರ್ ಪಾಂಡ ಅವರು ಜನಿಸಿದರು, ಪ್ರಸ್ತುತ ಇವರು ಒಡಿಯಾ ಭಾಷೆಯಲ್ಲಿ ಬರಹಗಳನ್ನು ರಚಿಸುತ್ತಾರೆ, ಇವರು ಒಟ್ಟು 16 ಕವನ ಸಂಕಲನಗಳು ಹಾಗೂ ಒಂದು ಕಾದಂಬರಿಯನ್ನು ಪ್ರಕಟಣೆ ಮಾಡಿದ್ದಾರೆ.