Job Description: * ಕರ್ನಾಟಕ ರಾಜ್ಯದ ತುಮಕೂರು ತಾಲ್ಲೂಕಿನ ದೇವರಾಯನದುರ್ಗ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹೊಸ ಸಸ್ಯ ಪ್ರಭೇದ ಪತ್ತೆಯಾಗಿದೆ. * ಈ ಹೊಸ ಪ್ರಭೇದದ ಸಸ್ಯವು ಒಣ ನೆಲದಲ್ಲಿ ಬೆಳೆಯುತ್ತದೆ ಹಾಗೂ ಇದಕ್ಕೆ ಜಿಲ್ಲೆಯ ಸ್ಮರಣಾರ್ಥ 'ಬ್ರಾಕಿಸ್ಟೆಲ್ಮಾ ತುಮಕೂರೆನ್ಸ್' ಎಂದು ನಾಮಕರಣ ಮಾಡಿದ್ದಾರೆ ಎಂದು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಅಧ್ಯಕ್ಷ ಬಿ.ವಿ.ಗುಂಡಪ್ಪ ಮಾಹಿತಿಯನ್ನು ನೀಡಿದ್ದಾರೆ. * ಈ ಹೊಸ ಪ್ರಭೇದದ ಸಸ್ಯವನ್ನು ದೇವರಾಯನದುರ್ಗ ಒಣ ಎಲೆ ಉದುರುವ ಕಾಡಿನ ಸಸ್ಯ ಅಧ್ಯಯನದ ಸಂದರ್ಭದಲ್ಲಿ ಪತ್ತೆ ಮಾಡಲಾಗಿದೆ, ಈ ಸಸ್ಯವು ಸುಮಾರು ಒಂದು ಮೀಟರ್ ಉದ್ದ ಹಾಗೂ ದುಂಡಾದ ಕಾಂಡವನ್ನು ಹೊಂದಿರಲಿದೆ ಎಂದು ತಿಳಿಸಿದ್ದಾರೆ.