Job Description: * ಭಾರತ ದೇಶವು ಯುನೈಟೆಡ್ ನೇಷನ್'ನ ಐಟಿಯು ಗ್ಲೋಬಲ್ ಸೈಬರ್ ಸೆಕ್ಯುರಿಟಿ ಸೂಚ್ಯಂಕದ ಶ್ರೇಯಾಂಕವನ್ನು 47 ರಿಂದ 10 ಕ್ಕೆ ಸುಧಾರಿಸಿದೆ ಎಂದು ತಿಳಿದು ಬಂದಿದೆ. * ಪ್ರಸ್ತುತ ದೇಶಗಳ ಜಾಗತಿಕ ಸೈಬರ್ ಸೆಕ್ಯುರಿಟಿ ಶ್ರೇಯಾಂಕದಲ್ಲಿ ಚೀನಾ 33 ಹಾಗೂ ಪಾಕಿಸ್ತಾನ 79 ನೇ ಶ್ರೇಯಾಂಕದಲ್ಲಿವೆ. * ಯುನೈಟೆಡ್ ಸ್ಟೇಟ್ಸ್ ಪ್ರಥಮ್ ಸ್ಥಾನ ಹಾಗೂ ಯುನೈಟೆಡ್ ಕಿಂಗ್ಡಮ್ ಅದರ ನಂತರದ ಸ್ಥಾನದಲ್ಲಿದೆ. * ಈ ಸೈಬರ್ ಸೆಕ್ಯುರಿಟಿ ಸೂಚ್ಯಂಕದ ಶ್ರೇಯಾಂಕವನ್ನು ಗಡಿಯಲ್ಲಿನ ಸೈಬರ್ ದಾಳಿಯ ನಿದರ್ಶನಗಳೊಂದಿಗೆ ಸರ್ಕಾರ ವ್ಯವಹರಿಸುತ್ತಿರುವ ಸಂಧರ್ಭದಲ್ಲಿ ಘೋಷಣೆ ಮಾಡಿದೆ. * ಜಾಗತಿಕ ಸೈಬರ್ ಸುರಕ್ಷತೆ ಸೂಚ್ಯಂಕ ಎನ್ನುವುದು ಇದೊಂದು ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ ಯೋಜನೆಯಾಗಿದೆ, ಈ ಯೋಜನೆಯು ವಿಶ್ವ ಮಟ್ಟದಲ್ಲಿ ಸೈಬರ್ ಸುರಕ್ಷತೆಗೆ ರಾಷ್ಟ್ರಗಳ ಬದ್ಧತೆಯನ್ನು ಅಳೆಯುವ ಸಾಧನವಾಗಿದೆ. * ಕಾನೂನು ಕ್ರಮಗಳು, ತಾಂತ್ರಿಕ ಕ್ರಮಗಳು, ಸಾಂಸ್ಥಿಕ ಕ್ರಮಗಳು, ಸಾಮರ್ಥ್ಯ ಅಭಿವೃದ್ಧಿ ಮತ್ತು ಸಹಕಾರದ ಎಲ್ಲ ಡೇಟಾವನ್ನು ಒಟ್ಟಾರೆ ಸ್ಕೋರ್ಗೆ ಒಗೂಡಿಸಲಾಗುತ್ತದೆ, ಐಟಿಯು ಗ್ಲೋಬಲ್ ಸೈಬರ್ಸೆಕ್ಯೂರಿಟಿ ಅಜೆಂಡಾದ ಉಪಕ್ರಮಕ್ಕೆ ಸಾಮಾನ್ಯ ಅಡಿಪಾಯವನ್ನು ನೀಡುತ್ತದೆ. * 1865 ರಲ್ಲಿ ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ ಸ್ಥಾಪನೆ ಮಾಡಲಾಗಿದೆ, ಹಾಗೂ ಇದೊಂದು ವಿಶ್ವಸಂಸ್ಥೆಯ 1947 ರ ಅವಿಭಾಜ್ಯ ಅಂಗವಾಗಿದೆ.