Job Description: * ಭಾರತ ರತ್ನ ಡಾ.ಅಂಬೇಡ್ಕರ್ ಸ್ಮಾರಕ ಮತ್ತು ಸಾಂಸ್ಕೃತಿಕ ಕೇಂದ್ರದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಚಾಲನೆ ನೀಡಿದರು. * ರಾಷ್ಟ್ರಪತಿ ಅವರು ಉತ್ತರ ಪ್ರದೇಶದ ರಾಜ್ಯದ ಲೋಕಭವನದಲ್ಲಿ ನಡೆದ ಸಭಾರಂಭದಲ್ಲಿ ಈ ಸ್ಮಾರಕದ ಶಂಕುಸ್ಥಾಪನೆಯನ್ನು ಮಾಡಿದರು, ಹಾಗೂ ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲರಾಗಿರುವ ಆನಂದಿಬೆನ್ ಪಟೇಲ್ , ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪ ಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ, ಪಾಲ್ಗೊಂಡಿದ್ದರು. * ಇತ್ತೀಚಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಉತ್ತರ ಪ್ರದೇಶ ರಾಜ್ಯದ ಲಖನೌಗೆ 2 ದಿನ ಪ್ರವಾಸ ಕೈಗೊಂಡಿದ್ದರು. * ಉತ್ತರ ಪ್ರದೇಶ ರಾಜ್ಯದ ಲಖನೌ'ನ ಐಶ್ಬಾಗ್ ಈದ್ಗಾನಲ್ಲಿ 5493.52 ಚದರ ಮೀ. ಪ್ರದೇಶದಲ್ಲಿ ಈ ಸ್ಮಾರಕವನ್ನು ನಿರ್ಮಾಣ ಮಾಡಲಾಗುವದು ಇದರಲ್ಲಿ 25 ಅಡಿ ಎತ್ತರದ ಡಾ.ಅಂಬೇಡ್ಕರ್ ಅವರ ಪ್ರತಿಮೆಯನ್ನು ನಿರ್ಮಾಣಮಾಡಲಾಗುತ್ತದೆ, ಒಟ್ಟಾರೆ 45.04 ಕೋಟಿ ರೂ. ವೆಚ್ಚ ಈ ಸ್ಮಾರಕಕ್ಕೆ ತಗುಲಲಿದೆ ಎಂದು ತಿಳಿಸಿದ್ದಾರೆ. * ಈ ಸ್ಮಾರಕದಲ್ಲಿ ಒಟ್ಟು 750 ಜನರ ಸಾಮರ್ಥ್ಯವಿರುವ ಸಭಾಂಗಣವಿರಲಿದೆ, ಹಾಗೂ ಗ್ರಂಥಾಲಯ, ಸಂಶೋಧನಾ ಕೇಂದ್ರ, ಚಿತ್ರ ಗ್ಯಾಲರಿ, ಮ್ಯೂಸಿಯಂ, ಕೆಫೆಟೇರಿಯಾ, ವಸತಿ ನಿಲಯ ಹೀಗೆ ಹಲವು ಸೌಲಭ್ಯಗಳನ್ನೂ ಒಳಗೊಂಡಿರಲಿದೆ ಎಂದು ತಿಳಿಸಿದ್ದಾರೆ.