Job Description: * ಭಾರತವು ಇದೀಗ ಕಚ್ಚಾ ತಾಳೆ ಎಣ್ಣೆಯ ಮೇಲಿನ ಆಮದು ತೆರಿಗೆಯನ್ನು(ಸುಂಕ) '3' ತಿಂಗಳಲ್ಲಿ 15% ರಿಂದ 10% ಕ್ಕೆ ಕಡಿತಗೊಳಿಸಿದೆ. * ಪ್ರಸ್ತುತ ಭಾರತವು ಖಾದ್ಯ ತೈಲಗಳ ಬೆಲೆಯನ್ನು ಕಡಿಮೆಗೊಳಿಸಲು ಹರಸಾಹಸ ಪಡುತ್ತಿದೆ, ಇದರಿಂದಾಗಿ ತೈಲಗಳ ಆಮದು ಸುಂಕವನ್ನು ಕಡಿಮೆ ಮಾಡುವ ನಿರ್ಧಾರ ಕೈಗೊಂಡಿದೆ. * ಈ ಆಮದು ತೆರಿಗೆ ಕಡಿತದಿಂದ ಪಾಮ್ ಎಣ್ಣೆಯನ್ನು ಸೋಯಾ ಎಣ್ಣೆ ಹಾಗೂ ಸೂರ್ಯಕಾಂತಿ ಎಣ್ಣೆಗಿಂತ ಹೆಚ್ಚು ಬೇಡಿಕೆಯಾಗುತ್ತದೆ, ಹಾಗೂ ಮುಂಬರುವ 3 ತಿಂಗಳಲ್ಲಿ ಉಷ್ಣವಲಯದ ತೈಲದ ಆಮದನ್ನು ಹೆಚ್ಚಿಸುವದರ ಜೊತೆಗೆ ಮಲೇಷಿಯಾದ ಬೆಂಚ್ಮಾರ್ಕ್'ಗೆ ಬೆಂಬಲ ನೀಡಲಿದೆ. * ಪ್ರಸ್ತುತ ಭಾರತ ದೇಶವು ತಾಳೆ ಎಣ್ಣೆಯನ್ನು ಪ್ರಮುಖವಾಗಿ ಇಂಡೋನೇಷ್ಯಾ ಹಾಗೂ ಮಲೇಷ್ಯಾ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ, ಭಾರತವು 3 ತಿಂಗಳಲ್ಲಿ ಭಾರತ 500,000 ಟನ್ಗಿಂತಲೂ ಅಧಿಕ ತಾಳೆ ಎಣ್ಣೆಯನ್ನು ಆಮದುಮಾಡಿಕೊಳ್ಳಲಿದೆ, ಭಾರತದ ಸರಾಸರಿ ಮಾಸಿಕ ಆಮದು ಸುಮಾರು 850,000 ಟನ್ ಆಗಿರಲಿದೆ ಎಂದು ತಿಳಿದುಬಂದಿದೆ.