Job Description: * 2021 ರ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) ವಿಶ್ವದ ಅತಿದೊಡ್ಡ ಮೊಬೈಲ್ ಈವೆಂಟ್ ಆಗಿದೆ, ಈ ಈವೆಂಟ್'ನ್ನು ಜೂನ್. 28 ರಂದು ಬಾರ್ಸಿಲೋನಾದಲ್ಲಿ ಆರಂಭವಾಗಿದೆ. * ಕೋವಿಡ್ -19 ಸಾಂಕ್ರಾಮಿಕ ರೋಗದ ನಡುವೆ ಹೈಬ್ರಿಡ್ ರೂಪದಲ್ಲಿ ಆಯೋಜಿಸಲಾಗುತ್ತಿರುವ ಅತಿದೊಡ್ಡ ವ್ಯಾಪಾರ ಪ್ರದರ್ಶನ ಇದಾಗಿದೆ, ಈ ಈವೆಂಟ್'ನಲ್ಲಿ ನೋಕಿಯಾ, ಗೋಗಲ್, ಫೇಸ್ಬುಕ್, ಶಿಯೋಮಿ, ಮತ್ತು ಸೋನಿ ಬ್ರಾಂಡ್ಗಳು ಪಾಲ್ಗೊಳ್ಳುತ್ತಿವೆ. * MWC ಬಾರ್ಸಿಲೋನಾ ಟೆಲಿಕಾಂ ಉದ್ಯಮದಲ್ಲಿನ ಆವಿಷ್ಕಾರಗಳನ್ನು ಕೇಂದ್ರೀಕರಿಸಿದ ವಾರ್ಷಿಕ ಕಾರ್ಯಕ್ರಮವಾಗಿದೆ, ಈ ಕಾರ್ಯಕ್ರಮದಲ್ಲಿ ಪ್ರಮುಖ ಟೆಲಿಕಾಂ ಆಪರೇಟರ್ಗಳು, ಸ್ಮಾರ್ಟ್ಫೋನ್ ಕಂಪನಿಗಳು, ಹಾಗೂ ವಿಶ್ವದಾದ್ಯಂತ ಇರುವ ಟೆಲಿಕಾಂ ಸಚಿವಾಲಯಗಳ ಪ್ರತಿನಿಧಿಗಳು ಪಾಲ್ಗೊಳ್ಳುತ್ತಾರೆ. * ಪ್ರಸ್ತುತ 2006 ರಿಂದ ಬಾರ್ಸಿಲೋನಾ MWC'ಗೆ ಆತಿಥ್ಯ ನೀಡುತ್ತಿದೆ, 2021 ನೇ ವರ್ಷದ MWC'ನ್ನು ಇದೇ ಜೂನ್. 28 ರಿಂದ ಜುಲೈ. 1 ರವರೆಗೆ ನಡೆಸಲಾಗುತ್ತದೆ, ಈ ಹಿಂದೆ 2020 ರಲ್ಲಿ ಈ ಕಾರ್ಯಕ್ರಮವನ್ನು ಕೋವಿಡ್-19 ಕಾರಣದಿಂದಾಗಿ ರದ್ದುಪಡಿಸಲಾಯಿತು.