Job Description: * ಪ್ರಸ್ತುತ ದಿವಂಗತ ಪ್ರೊಫೆಸರ್ ಪ್ರಸಂತ ಚಂದ್ರ ಮಹಾಲನೋಬಿಸ್ ಅವರ ಜನ್ಮ ದಿನದ ಸ್ಮರಣಾರ್ಥವಾಗಿ ಜೂನ್. 29ರಂದು ರಾಷ್ಟ್ರೀಯ ಅಂಕಿಅಂಶ ದಿನವನ್ನು ಆಚರಣೆ ಮಾಡಲಾಗುತ್ತದೆ. * 2021 ರ ರಾಷ್ಟ್ರೀಯ ಅಂಕಿಅಂಶ ದಿನದ ವಿಷಯವು ಯುಎನ್ ಸುಸ್ಥಿರ ಅಭಿವೃದ್ಧಿ ಗುರಿ 2 ರಿಂದ ಹಸಿವನ್ನು ಮುಕ್ತಗೊಳಿಸಿ ಆಹಾರ ಭದ್ರತೆ ಹಾಗೂ ಸುಧಾರಿತ ಪೋಷಣೆಯನ್ನು ಸಾಧಿಸಿ ಜೊತೆಗೆ ಸುಸ್ಥಿರ ಕೃಷಿಯನ್ನು ಉತ್ತೇಜಿಸಿ' ಇದು ಈ 2021 ನೇ ವರ್ಷದ ಥಿಮ್ ಆಗಿದೆ. * ಸಾಮಾನ್ಯವಾಗಿ ಪ್ರಸಂತ ಚಂದ್ರ ಮಹಾಲನೋಬಿಸ್ ಅವರನ್ನು ಭಾರತೀಯ ಅಂಕಿಅಂಶಗಳ ಪಿತಾಮಹ ಎಂದು ಕರೆಯುತ್ತಾರೆ, ಹಾಗೂ ಇವರು 1893 ರ ಜೂನ್. 29 ರಂದು ಕಲ್ಕತ್ತಾ ನಗರದಲ್ಲಿ ಜನಿಸಿದ್ದಾರೆ, ಹಾಗೂ ಇವರು ಭಾರತದ ಮೊದಲ ಯೋಜನಾ ಆಯೋಗದ ಸದಸ್ಯರಾಗಿದ್ದರು. * ಮಹಾಲನೋಬಿಸ್ ದೂರ ಎಂಬುವದು ಸೂತ್ರವಾಗಿದೆ, ಇದನ್ನು ಒಂದು ಬಿಂದು ಮತ್ತು ವಿತರಣೆಯ ನಡುವಿನ ಅಂತರವನ್ನು ಕಂಡುಹಿಡಿಯಲು ಬಳಸುತ್ತಾರೆ, ಮತ್ತು ಕ್ಲಸ್ಟರ್ ವಿಶ್ಲೇಷಣೆ ಹಾಗೂ ವರ್ಗೀಕರಣದ ಕ್ಷೇತ್ರದಲ್ಲಿ ವ್ಯಾಪಕವಾಗಿ ಈ ಸೂತ್ರವನ್ನು ಬಳಸುತ್ತಾರೆ.