Job Description: * 2021 ರ ಫುಕುಯೋಕಾ ಪ್ರಶಸ್ತಿಯನ್ನು ಖ್ಯಾತ ಪತ್ರಕರ್ತ ಪಿ.ಸೈನಾಥ್ ಅವರನ್ನು ಆಯ್ಕೆ ಮಾಡಲಾಗಿದೆ * ಫುಕುಯೋಕಾ ಬಹುಮಾನದ ‘ಗ್ರ್ಯಾಂಡ್ ಪ್ರಶಸ್ತಿ’ ಸೈನಾಥ್ ಅವರು ಸ್ವೀಕಾರ ಮಾಡಲಿದ್ದಾರೆ, ಹಾಗೂ ಜಪಾನ್'ನ ಪ್ರೊ. ಕಿಶಿಮೊಟೊ ಮಿಯೊ ಅವರಿಗೆ ಶೈಕ್ಷಣಿಕ ಪ್ರಶಸ್ತಿ, ಹಾಗೂ ಥೈಲ್ಯಾಂಡ್ನ ಚಲನಚಿತ್ರ ನಿರ್ಮಾಪಕ ಪ್ರಬ್ದಾ ಯೂನ್'ಗೆ ಕಲೆ ಮತ್ತು ಸಂಸ್ಕೃತಿಗೆ ಈ ಬಹುಮಾನವನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. * ಸೈನಾಥ್ ಅವರ ಗ್ರಾಮೀಣ ಭಾರತದ ಬಗೆಗಿನ ಬರಹಗಳು ಹಾಗೂ ನಾಗರಿಕ ಸಹಕಾರವನ್ನು ಉತ್ತೇಜಿಸುವದರ ಜೊತೆಗೆ ಹೊಸ ರೀತಿಯ ಜ್ಞಾನವನ್ನು ರಚಿಸುವ ಕಾರ್ಯಕ್ಕಾಗಿ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಈ ಫುಕುಯೋಕಾ ಪ್ರಶಸ್ತಿಯನ್ನು ಫುಕುಯೋಕಾ ಸಿಟಿ ಇಂಟರ್ನ್ಯಾಷನಲ್ ಫೌಂಡೇಶನ್ ಸ್ಥಾಪಿಸಿದೆ, ಪ್ರಸ್ತುತ ಈ ಪ್ರಶಸ್ತಿಯನ್ನು ಏಷ್ಯನ್ ಸಂಸ್ಕೃತಿ ಸಂರಕ್ಷಿಸುವ ವ್ಯಕ್ತಿಗಳು ಅಥವಾ ಸಂಸ್ಥೆಗಳ ಗೌರವವನ್ನು ಗೌರವಿಸಲು ನೀಡಲಾಗುತ್ತದೆ. * ಫುಕುಯೋಕಾ ಪ್ರಶಸ್ತಿಯು 3ಬಹುಮಾನ ವಿಭಾಗಗಳನ್ನು ಒಳಗೊಂಡಿದೆ ಅವುಗಳು: ಗ್ರ್ಯಾಂಡ್ ಪ್ರಶಸ್ತಿ, ಶೈಕ್ಷಣಿಕ ಪ್ರಶಸ್ತಿ ಹಾಗೂ ಕಲೆ ಮತ್ತು ಸಂಸ್ಕೃತಿ ಪ್ರಶಸ್ತಿಗಳಾಗಿವೆ. * ಒಟ್ಟಾರೆ '11' ಭಾರತೀಯರು ಫುಕುಯೋಕಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ, ಕಳೆದ 30 ವರ್ಷಗಳಲ್ಲಿ 28 ದೇಶಗಳಿಂದ ಸುಮಾರು 115 ಜನರು ಈ ಬಹುಮಾನವನ್ನು ಪಡೆದುಕೊಂಡಿದ್ದಾರೆ.