Job Description: * ಭಾರತ್ ಬಯೋಟೆಕ್ ಸಂಸ್ಥೆಯು ಕೋವಿಡ್-19 ಸಕ್ರಾಮಿಕ ರೋಗದ ವಿರುದ್ಧ ಹೋರಾಡಲು ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಅಭಿವೃದ್ಧಿಪಡಿಸಿದೆ, ಇದೀಗ ಈ ಲಸಿಕೆಯು ಆಲ್ಫಾ, ಡೆಲ್ಟಾ ಕರೋನ ರೂಪಾಂತರ ವೈರಸ್'ಗಳ ವಿರುದ್ಧ ಹೋರಾಡಲು ಪರಿಣಾಮಕಾರಿಯಾಗಿದೆ ಅಲ್ಲದೆ ತಟಸ್ಥಗೊಳಿಸುವ ಸಾಮರ್ಥ್ಯವನ್ನು ಈ ಲಸಿಕೆ ಹೊಂದಿದೆ ಎಂದು ಅಮೆರಿಕ ರಾಷ್ಟ್ರೀಯ ಆರೋಗ್ಯ (NIH) ಸಂಸ್ಥೆ ತಿಳಿಸಿದೆ. * ಕೋವಿಡ್-19 ನ ಆಲ್ಫಾ ಅಥವಾ B.1.1.7 ರೂಪಾಂತರ ವೈರಸ್ ಮೊದಲ ಬಾರಿ ಬ್ರಿಟನ್ನಲ್ಲಿ ಪತ್ತೆಯಾಗಿದೆ, ಹಾಗೂ ಡೆಲ್ಟಾ ರೂಪಾಂತರ ವೈರಸ್ ಮೊದಲು ಬಾರಿ ಭಾರತದಲ್ಲಿ ಪತ್ತೆಯಾಗಿದೆ ಇದೀಗ ಈ ರೂಪತರಗಳ ವಿರುದ್ಧ ಹೋರಾಡಲು ಈ ಕೋವ್ಯಾಕ್ಸಿನ್ ಸಮರ್ಥವಾಗಿದೆ NIH ತಿಳಿಸಿದೆ. * ಪ್ರಸ್ತುತ ಈ 'ಕೋವ್ಯಾಕ್ಸಿನ್' ಲಸಿಕೆ 3 ನೇ ಹಂತದ ಪ್ರಯೋಗದ ವರದಿ ಪ್ರಕಾರ ಈ ಲಸಿಕೆಯು ಕೋವಿಡ್ ಸೋಂಕಿನ ವಿರುದ್ಧ ಹೋರಾಡಲು 78% ಪರಿಣಾಮಕಾರಿ ಎಂದು ತಿಳಿಸಿದ್ದಾರೆ. * ಸುಮಾರು 2.5 ಕೋಟಿಗೂ ಅಧಿಕ ಕೋವ್ಯಾಕ್ಸಿನ್ ಲಸಿಕೆಯ ಡೋಸ'ನ್ನು ಭಾರತ ಹಾಗೂ ಇತರೆ ದೇಶಗಳು ಜನರಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.