Job Description: * ಮ್ಯಾನ್ಮಾರ್ನ ಸೇನಾದಂಗೆಯ ಕಾರಣದಿಂದಾಗಿ 700 ಕ್ಕೂ ಹೆಚ್ಚು ನಿರಾಶ್ರಿತರಿಗೆ ಮಿಜೋರಾಂ ರಾಜ್ಯದಲ್ಲಿ ಆಶ್ರಯ ನೀಡಲಾಗಿದೆ ಎಂದು ಅಲ್ಲಿನ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. * ಮ್ಯಾನ್ಮಾರ್'ನ ಸೇನಾ ದಂಗೆಯ ಬಳಿಕ ಅಲ್ಲಿನ ಒಟ್ಟು 10,025 ಜನ ಪ್ರತಿನಿಧಿಗಳು ಮಿಜೋರಾಂಗೆ ವಲಸೆ ಬಂದಿದ್ದಾರೆ, ಇವರಲ್ಲಿ ಕನಿಷ್ಠ 22 ಮಂದಿ ಮ್ಯಾನ್ಮಾರ್'ನ ಸಂಸತ್ ಸದಸ್ಯರನ್ನು ಒಂಳಗೊಂಡಿದ್ದಾರೆ. * ಮ್ಯಾನ್ಮಾರ್'ನ ಚಿನ್ ರಾಜ್ಯದ ಮುಖ್ಯಮಂತ್ರಿಯಾಗಿರುವ ಸಲಾಯ್ ಲಿಯಾನ್ ಲುವಾಯಿ ಇದೇ ಜೂನ್. 14 ರಂದು ಮಿಜೋರಾಂಗೆ ಬಂದಿದ್ದಾರೆ ಎಂದೂ ತಿಳಿಸಿದ್ದಾರೆ. * ಮಿಜೋರಾಂನ ರಾಜ್ಯ ಪೊಲೀಸ್ ಇಲಾಖೆಯ ನೀಡಿರುವ ಮಾಹಿತಿಯ ಪ್ರಕಾರ ಇದೇ ಜೂನ್.15 ರಿಂದ 26 ರ ಸಮಯದಲ್ಲಿ ಮ್ಯಾನ್ಮಾರ್'ನ ಅತೀ ಹೆಚ್ಚು ನಿರಾಶ್ರಿತರು ಮಿಜೋರಾಂನ ಚಂಪಾಯಿ ಜಿಲ್ಲೆಯಲ್ಲಿ ವಾಸವಾಗಿದ್ದಾರೆ ಎಂದು ತಿಳಿದು ಬಂದಿದೆ.