Job Description: * ನವ ಪೀಳಿಗೆಗಳ ಅತ್ಯಾಧುನಿಕ ರೂಪಾಂತರಿ ಕ್ಷಿಪಣಿ ಎಂದೇ ಹೇಳಲಾಗುತ್ತಿರುವ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಇಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. * ನವ ಪೀಳಿಗೆಯ ಅತ್ಯಾಧುನಿಕ ರೂಪಾಂತರಿ ಕ್ಷಿಪಣಿ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಸೋಮವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ಬೆಳಿಗ್ಗೆ 10.55 ಕ್ಕೆ ಒಡಿಶಾ ತೀರದಲ್ಲಿ ಅಗ್ನಿ-ಪ್ರೈಮ್ ಹೊಸ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿದೆ ಎಂದು ಡಿಆರ್ ಡಿಒ (DRDO) ಮೂಲಗಳು ಮಾಹಿತಿ ನೀಡಿವೆ. * ರೂಪಾಂತರಿ ಅಗ್ನಿ-ಪ್ರೈಮ್ ಕ್ಷಿಪಣಿಯು ಅಗ್ನಿ ಸರಣಿಯ ಕ್ಷಿಪಣಿಗಳ ನವ ಪೀಳಿಗೆಯ ಸುಧಾರಿತ ರೂಪಾಂತರವಾಗಿದೆ. ಇದು 1000 ರಿಂದ 2000 ಕಿ.ಮೀ ನಡುವಿನ ವ್ಯಾಪ್ತಿಯ ಸಾಮರ್ಥ್ಯವನ್ನು ಹೊಂದಿರುವ ಕ್ಷಿಪಣಿಯಾಗಿದೆ ಎಂದು ಡಿಆರ್ಡಿಒ(DRDO) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.